ADVERTISEMENT

ಸಚಿವ ಅನಂತಕುಮಾರ್ ಹೆಗಡೆ ಪ್ರತಿಕೃತಿ ದಹನ

‘ಅನಂತಕುಮಾರ್ ಹೆಗಡೆ ಗೋ ಬ್ಯಾಕ್’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 11:20 IST
Last Updated 25 ಮಾರ್ಚ್ 2018, 11:20 IST
ಸಚಿವರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು
ಸಚಿವರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು   

ಯಾದಗಿರಿ: ಸಂವಿಧಾನ ಬದಲಿಸುವ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಗರದಲ್ಲಿ ಭಾನುವಾರ ನಡೆಯುವ ಹಿಂದೂ ಸಮಾವೇಶದಲ್ಲಿ ಭಾಗವಹಿಸುತ್ತಿರುವುದನ್ನು ಖಂಡಿಸಿದ ಹಲವು ದಲಿತ ಸಂಘಟನೆಗಳು ‘ಅನಂತಕುಮಾರ್ ಹೆಗಡೆ ಗೋ ಬ್ಯಾಕ್’ ಎಂದು ಆಕ್ರೋಶ ವ್ಯಕ್ತಪಡಿಸಿದವು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ದಲಿತ ಸಂಘಟನೆಗಳ ಪದಾಧಿಕಾರಿಗಳು, ದಲಿತ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ಸಚಿವ ಅನಂತಕುಮಾರ ಹೆಗಡೆ ಅವರ ಅಣಕು ಶವಯಾತ್ರೆ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಬದ್ಧವಾಗಿ ಗೆದ್ದು, ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಅನಂತಕುಮಾರ ಹೆಗಡೆ ಈಗ ಸಂವಿಧಾನದ ಬದಲಾವಣೆ ಮಾಡುವುದಾಗಿ ಹೇಳಿಕೆ ನೀಡಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸಂವಿಧಾನದ ಬಗ್ಗೆ ವಿಶ್ವಾಸ ಇಲ್ಲದವರು ಸಚಿವ ಸ್ಥಾನಕ್ಕೆ ಅರ್ಹರಲ್ಲ. ಇಂತಹ ಹೇಳಿಕೆ ಮೂಲಕ ಸಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುವುದಲ್ಲದೇ ಕೋಮುವಾದ ಸೃಷ್ಟಿಸಿ ರಾಜ್ಯದಲ್ಲಿ ಕಿಚ್ಚು ಹೊತ್ತಿಸಿ ಅಧಿಕಾರ ಪಡೆಯಬೇಕೆಂಬ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು. ನಂತರ ಶಾಸ್ತ್ರಿ ವೃತ್ತದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಪ್ರತಿಕೃತಿ ದಹಿಸಿದರು.

ದಲಿತ ಒಕ್ಕೂಟ ಸಂಘಟನೆ ಅಧ್ಯಕ್ಷ ಗೋಪಾಲ ತೆಳಗೇರಿ, ಮರೆಪ್ಪ ಚಟ್ಟರಕರ್, ಮರೆಪ್ಪ ಈಟೆ, ಶ್ಯಾಂಸನ್ ಮಾಳಿಕೇರಿ, ಸಾಬಣ್ಣ ಸುಂಗಲಕರ್, ಅಯ್ಯಣ ಸುಂಗಲಕ್, ಶರಣಪ್ಪ ಕೂಯಿಲೂರ್, ಶರಣಪ್ಪ ನಾಟೇಕರ್, ನರೇಂದ್ರ ಅನವಾರ್, ಚಂದ್ರಶೇಖರ ಬಿರನಾಳ, ಮಲ್ಲಿನಾಥ ಸುಂಗಲಕರ್, ಸುರೇಶ ನಾಯಕ, ಚಂದಪ್ಪ ಮುನಿಯಪ್ಪನೋರ್, ಮಲ್ಲಿಕಾರ್ಜುನ ಹತ್ತಿಕುಣಿ, ಶಿವು ಕುರಕುಂಬಳ, ವಿನೋದ ಶಿರಗೋಳ, ಮೋನೆಶ ಗಿರೆಪ್ಪನೋರ್, ಶ್ರೀಕಾಂತ ಸುಂಗಲಕರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.