ADVERTISEMENT

‘ಸಾಲ ಮನ್ನಾ; ಎಲ್ಲ ಶ್ರೇಯ ಸಿ.ಎಂಗೆ ಸೇರಲಿ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
‘ಸಾಲ ಮನ್ನಾ; ಎಲ್ಲ ಶ್ರೇಯ ಸಿ.ಎಂಗೆ ಸೇರಲಿ’
‘ಸಾಲ ಮನ್ನಾ; ಎಲ್ಲ ಶ್ರೇಯ ಸಿ.ಎಂಗೆ ಸೇರಲಿ’   

ಮೈಸೂರು: ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದರೆ ಅದರ ಎಲ್ಲ ಶ್ರೇಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುವುದು. ರೈತರಿಗೆ ಅನುಕೂಲವಾಗುವುದಾದರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇದರಲ್ಲಿ ‘ಇಗೊ’ ಪ್ರಶ್ನೆ ಇದೆಯೇ ಎಂಬ ಪ್ರಶ್ನೆಗೆ ಕೋಪಗೊಂಡ ಅವರು, ‘ಇಗೊ ಪ್ರಶ್ನೆ ಎಲ್ಲಿಯದು. ಸಾಲ ಮನ್ನಾ ಮಾಡಿದರೆ ಅದರ ಶ್ರೇಯಸ್ಸು ಅವರಿಗೇ ದಕ್ಕಲಿ. ನಾನೇ ಮುಂದೆ ನಿಂತು ಅವರನ್ನು ಅಭಿನಂದಿಸುತ್ತೇನೆ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ  ಹೇಳಿದರು.

ಸಾಲ ಮನ್ನಾ ಮಾಡದಿದ್ದರೆ ಜುಲೈ 7, 8 ಮತ್ತು 9ರಂದು ಬೆಂಗಳೂರಿನಲ್ಲಿ ಸತ್ಯಾಗ್ರಹ ಕೈಗೊಳ್ಳಲಾಗುವುದು. 10ರಂದು 4 ಲಕ್ಷ ರೈತರನ್ನು ಒಳಗೊಂಡ ಸಮಾವೇಶ ನಡೆಸಲಾಗುವುದು ಎಂದರು.

ADVERTISEMENT

ಕೇಂದ್ರ ಸರ್ಕಾರ ಬ್ಯಾಂಕುಗಳ ಮೂಲಕ ರೈತರಿಗೆ ನೀಡಿರುವ ಸಾಲ ಮನ್ನಾ ಮಾಡುವ ವಿಚಾರವನ್ನು ಸೂಕ್ತ ವೇದಿಕೆಯಲ್ಲಿ ಪ್ರಸ್ತಾಪಿಸಲಾಗುವುದು. ಸದ್ಯ, ಇಲ್ಲಿ ಅದರ ಚರ್ಚೆ ಬೇಡ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನ್ಯಾಯಬೆಲೆ ಅಂಗಡಿ ಮುಂದೆ ಮೋದಿ ಭಾವಚಿತ್ರ ಹಾಕಲು ಕರೆ: ಕೇಂದ್ರ ಸರ್ಕಾರವು ಪ್ರತಿ ಕೆ.ಜಿ ಅಕ್ಕಿಗೆ ₹ 29 ಹಾಗೂ ಗೋಧಿಗೆ ₹ 20 ನೀಡಿ ಖರೀದಿಸುತ್ತಿದೆ.

ಇದನ್ನೇ ರಾಜ್ಯ ಸರ್ಕಾರ ‘ಅನ್ನಭಾಗ್ಯ’ದ ಹೆಸರಿನಲ್ಲಿ ಜನರಿಗೆ ಹಂಚುತ್ತಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದರ ಭಾವಚಿತ್ರ ಹಾಕಬೇಕು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರೇ ಆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.