ADVERTISEMENT

ಸಿಂಗರೇಣಿಯಿಂದ 81 ಲಕ್ಷ ಟನ್‌ ಕಲ್ಲಿದ್ದಲು ಖರೀದಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ಕಲ್ಲಿದ್ದಲು ಖರೀದಿ ಒಪ್ಪಂದ ಪತ್ರ ಹಸ್ತಾಂತರಿಸುತ್ತಿರುವ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್‌ ನಾಯ್ಕ್‌ ಮತ್ತು ಸಿಂಗರೇಣಿ ಕಂಪೆನಿ ಅಧ್ಯಕ್ಷ ಎನ್‌.ಶ್ರೀಧರ್‌.  ಅಧಿಕಾರಿಗಳಾದ ಎನ್‌.ಶ್ರೀನಿವಾಸ್‌, ಬಿ.ಕೃಷ್ಣರಾವ್‌, ಎನ್‌.ವಿ.ಕೆ.ಶ್ರೀನಿವಾಸರಾವ್‌, ಪಿ.ಭಾಸ್ಕರ, ನಾಗರಾಜ ಮತ್ತು ಯತಿರಾಜ್‌ ಇದ್ದರು.

ಬೆಂಗಳೂರು:  ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) 81 ಲಕ್ಷ ಟನ್‌ ಕಲ್ಲಿದ್ದಲು ಖರೀದಿಸಲು ಸಿಂಗರೇಣಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಸಿಂಗರೇಣಿ ಈ ವರ್ಷ  ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ 30 ಲಕ್ಷ ಟನ್‌,  ಯರಮರಸ್‌ ಶಾಖೋತ್ಪನ್ನ ಕೇಂದ್ರಕ್ಕೆ 20 ಲಕ್ಷ ಟನ್‌ ಮತ್ತು 31 ಲಕ್ಷ ಟನ್‌ ಕಲ್ಲಿದ್ದಲ್ಲನ್ನು ಬಳ್ಳಾರಿ ಶಾಖೋತ್ಪನ್ನ ಕೇಂದ್ರಕ್ಕೆ ಸರಬರಾಜು ಮಾಡಲಿದೆ ಎಂದು ಕೆಪಿಸಿಎಲ್‌ ತಿಳಿಸಿದೆ. ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ್ ನಾಯ್ಕ್‌ ಮತ್ತು ಸಿಂಗರೇಣಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್‌.ಶ್ರೀಧರ್‌ ಅವರ ಸಮ್ಮುಖದಲ್ಲಿ ಅಧಿಕಾರಿಗಳು ಒಪ್ಪಂದ ಪತ್ರಕ್ಕೆ ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT