ADVERTISEMENT

ಸಿ.ಎಂ ಭರವಸೆ: ನಿರಶನ ವಾಪಸ್-ಪೇಜಾವರಶ್ರೀ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST
ಸಿ.ಎಂ ಭರವಸೆ: ನಿರಶನ ವಾಪಸ್-ಪೇಜಾವರಶ್ರೀ
ಸಿ.ಎಂ ಭರವಸೆ: ನಿರಶನ ವಾಪಸ್-ಪೇಜಾವರಶ್ರೀ   

ಉಡುಪಿ: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ಯುಪಿಸಿಎಲ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ನಿರಶನ ಅಂತ್ಯಗೊಳಿಸಿರುವುದಾಗಿ ಪೇಜಾವರ ವಿಶ್ವೇಶತೀರ್ಥ  ಸ್ವಾಮೀಜಿ ಅವರು ತಿಳಿಸಿದರು.

ಯುಪಿಸಿಎಲ್ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯಿಂದ ಇಬ್ಬರು ಸದಸ್ಯರನ್ನು ಏಕಾಏಕಿ ಕೈಬಿಟ್ಟಿದ್ದರಿಂದ ಅಸಮಾಧಾನಗೊಂಡ ಸ್ವಾಮೀಜಿ ನಂದಿಕೂರಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 3 ದಿನಗಳ ನಿರಶನವನ್ನು ಸೋಮವಾರ  ಆರಂಭಿಸಿದ್ದರು. ಸಚಿವ ಆಚಾರ್ಯ ಮಂಗಳವಾರ ಬೆಳಿಗ್ಗೆ ನಂದಿಕೂರಿಗೆ ತೆರಳಿ ಪರಿಹಾರ ಸೂತ್ರ ಕುರಿತು ಚರ್ಚಿಸಿದ ನಂತರ ನಿರಶನ ಕೈಬಿಟ್ಟ ಸ್ವಾಮೀಜಿ, ಮಧ್ಯಾಹ್ನ ಉಡುಪಿ ಪೇಜಾವರ ಮಠಕ್ಕೆ ಆಗಮಿಸಿ ಸುದ್ದಿಗೋಷ್ಠಿಯನ್ನು ನಡೆಸಿದರು.

`ಕೈಬಿಟ್ಟಿರುವ ಇಬ್ಬರು ತಜ್ಞರನ್ನು ಸಮಿತಿಗೆ ಮರಳಿ ಸೇರಿಸಿಕೊಳ್ಳಬೇಕು ಎಂಬ ಒತ್ತಾಯಕ್ಕೆ ಯಾರಿಂದಲೂ ಒಪ್ಪಿಗೆ ಬಂದಿಲ್ಲ. ಆದರೆ ಸರ್ಕಾರಕ್ಕೆ ಗೌರವ ಕೊಡಬೇಕು ಎಂಬ ಕಾರಣಕ್ಕೆ ಒಲ್ಲದ ಮನಸ್ಸಿನಿಂದಲೇ ನಿರಶನ ಕೈಬಿಟ್ಟಿದ್ದೇನೆ. ಆರೋಗ್ಯ ಸಮಸ್ಯೆಯೇನೂ ಇಲ್ಲ~ ಎಂದು ಸ್ಪಷ್ಟಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.