ADVERTISEMENT

ಸಿಎನ್‌ಆರ್, ಸಾರಾಗೆ `ಮಾಸ್ತಿ ಪ್ರಶಸ್ತಿ'

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ಬೆಂಗಳೂರು: ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್, ಹಿರಿಯ ಲೇಖಕಿ ಡಾ.ಸಾರಾ ಅಬೂಬಕ್ಕರ್ ಹಾಗೂ ಲೇಖಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು 2013ನೇ ಸಾಲಿನ ಪ್ರತಿಷ್ಠಿತ `ಮಾಸ್ತಿ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸಮಿತಿಯು ಜೂನ್ ತಿಂಗಳಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ತಲಾ ರೂ. 25 ಸಾವಿರ   ನಗದು ಹಾಗೂ ಫಲಕವನ್ನು ಲೇಖಕರಿಗೆ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೇಖಕರ ಪರಿಚಯ: ರಾಮಚಂದ್ರನ್ ಅವರ ಶಿಲ್ಪ ವಿನ್ಯಾಸ, ಸಾಹಿತ್ಯ ವಿಮರ್ಶೆ, ತೌಲನಿಕ ಸಾಹಿತ್ಯ, ವಸಾಹತೋತ್ತರ ಚಿಂತನೆ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದ 17 ವಿರ್ಮಶನ ಕೃತಿಗಳು ಪ್ರಕಟಗೊಂಡಿದೆ. ಇದಲ್ಲದೇ ಇಂಗ್ಲಿಷ್‌ನಲ್ಲೂ ಒಂಬತ್ತು ಕೃತಿಗಳು ಬಿಡುಗಡೆಗೊಂಡಿವೆ.

ಮಲೆಯಾಳಂನಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಭಾಷಾಂತರಿಸಿರುವ ಸಾರಾ ಅಬೂಬಕ್ಕರ್ ಜನಪ್ರಿಯ ಕಾದಂಬರಿ `ಚಂದ್ರಗಿರಿ ತೀರದಲ್ಲಿ', `ಹೊತ್ತು ಕಂತುವ ಮುನ್ನ' ಆತ್ಮಚರಿತ್ರೆ ಸೇರಿ  28 ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದಾರೆ.

ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಕಾವ್ಯ, ವಿಮರ್ಶೆ, ಅನುಭವ ಕಥನ, ನಾಟಕ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ 25 ಕೃತಿಗಳನ್ನು ರಚಿಸಿದ್ದಾರೆ. `ಅಂಬಿಗರ ಚೌಡಯ'್ಯ, `ಕಣ್ಣುಗಾಯ ಕಾಲುದಾರಿಗಳು', `ಸಂತ ಸರ್ವಜ್ಞ' ವಿಮರ್ಶನಾ ಕೃತಿಗಳು ಪ್ರಕಟಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.