ADVERTISEMENT

ಸಿಎಸಿಪಿಟಿ ಫಲಿತಾಂಶ: ಆಳ್ವಾಸ್‌ನ ತವಿಶಿ ರಾಷ್ಟ್ರಕ್ಕೆ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಸಿಎಸಿಪಿಟಿ ಫಲಿತಾಂಶ: ಆಳ್ವಾಸ್‌ನ ತವಿಶಿ ರಾಷ್ಟ್ರಕ್ಕೆ ದ್ವಿತೀಯ
ಸಿಎಸಿಪಿಟಿ ಫಲಿತಾಂಶ: ಆಳ್ವಾಸ್‌ನ ತವಿಶಿ ರಾಷ್ಟ್ರಕ್ಕೆ ದ್ವಿತೀಯ   

ಮೂಡುಬಿದಿರೆ: ಜೂನ್‌ನಲ್ಲಿ ನಡೆದ ಸಿಎಸಿಪಿಟಿ (ಚಾರ್ಟರ್ಡ್‌ ಅಕೌಂಟೆನ್ಸಿ ಕಾಮನ್‌ ಪ್ರೊಫಿಶಿಯನ್ಸಿ ಟೆಸ್ಟ್‌) ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ತವಿಶಿ ದೇಚಮ್ಮ 191 ಅಂಕದೊಂದಿಗೆ ದೇಶಕ್ಕೆ ದ್ವಿತೀಯ ಹಾಗೂ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಆಳ್ವಾಸ್‌ನ ಉಚಿತ ಶಿಕ್ಷಣ ಯೋಜನೆಯಡಿ ದ್ವಿತೀಯ ಪಿಯುಸಿ (ವಾಣಿಜ್ಯ) ವ್ಯಾಸಂಗ ಪೂರೈಸಿದ್ದರು. ಈಗ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಸಿಎ ಅಭ್ಯಾಸದ ಜತೆಗೆ ಸಂಜೆ ಬಿ.ಕಾಂ ಪದವಿ ಓದುತ್ತಿದ್ದಾರೆ.

ಮಡಿಕೇರಿಯವರಾದ ತವಿಶಿ ಅವರ ತಂದೆ ಪ್ರೀತಂ ವಕೀಲರು, ತಾಯಿ ಹೇಮಾ ಸ್ಥಳೀಯ ಟಿ.ವಿ ಚಾನೆಲ್‌ನಲ್ಲಿ ಉದ್ಯೋಗಿ.

‘ಆಳ್ವಾಸ್‌ ಕಾಲೇಜಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಾತಾವರಣ ನನ್ನ ಫಲಿತಾಂಶಕ್ಕೆ ಪ್ರೇರಣೆಯಾಯಿತು. ಮೋಹನ ಆಳ್ವ ಅವರ ಕೊಡುಗೆ ದೊಡ್ಡದು’ ಎಂದು ತವಿಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.