ADVERTISEMENT

ಸಿದ್ದಾಪುರ, ಹುಲಿಕಲ್‌ನಲ್ಲಿ ಅತಿ ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST
ಸಿದ್ದಾಪುರ, ಹುಲಿಕಲ್‌ನಲ್ಲಿ  ಅತಿ ಹೆಚ್ಚು ಮಳೆ
ಸಿದ್ದಾಪುರ, ಹುಲಿಕಲ್‌ನಲ್ಲಿ ಅತಿ ಹೆಚ್ಚು ಮಳೆ   

ಬೆಂಗಳೂರು: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕೆಳೆದ 24 ಗಂಟೆಗಳಲ್ಲಿ ಕರಾವಳಿಯ ಹಲವೆಡೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಸಿದ್ದಾಪುರ, ಹುಲಿಕಲ್‌ನಲ್ಲಿ 11 ಸೆಂ.ಮೀ ಮಳೆಯಾಗಿದೆ.

ಮಂಗಳೂರು ವಿಮಾನ ನಿಲ್ದಾಣ, ಭಾಗಮಂಡಲ 10, ಗೇರುಸೊಪ್ಪ 9, ನೀಲ್ಕುಂದ 8, ಪಣಂಬೂರು 6, ಮಂಗಳೂರು, ಮೂಲ್ಕಿ, ಬಂಟ್ವಾಳ, ಸುಳ್ಯ, ಕಾರವಾರ, ಸಿಂಧನೂರು, ನಾಪೋಕ್ಲು, ಆಗುಂಬೆ, ಕೊಟ್ಟಿಗೆಹಾರ 5, ಮೂಡುಬಿದಿರೆ, ಮಾಣಿ, ಪುತ್ತೂರು, ಕಾರ್ಕಳ, ಕೊಲ್ಲೂರು, ಕುಮಟಾ, ಸಿದ್ದಾಪುರ (ಉ.ಕ), ವಿರಾಜಪೇಟೆ, ಪೊನ್ನಂಪೇಟೆ 4, ಧರ್ಮಸ್ಥಳ, ಸುಬ್ರಹ್ಮಣ್ಯ, ಕೋಟ, ಹೊನ್ನಾವರ, ಅಂಕೋಲ, ಮಡಿಕೇರಿ, ತೀರ್ಥಹಳ್ಳಿ, ಮೂಡಿಗೆರೆ, ಕಮ್ಮರಡಿ, ಕೊಪ್ಪ 3, ಬೆಳ್ತಂಗಡಿ, ಉಪ್ಪಿನಂಗಡಿ, ಉಡುಪಿ, ಕ್ಯಾಸಲ್ ರಾಕ್, ಗಂಗಾವತಿ, ತಾವರೆಕೆರೆ, ಮಸ್ಕಿ, ಮಾದಾಪುರ, ಸೋಮವಾರಪೇಟೆ, ಲಿಂಗನಮಕ್ಕಿ, ಸಾಗರ, ಹೊಸನಗರ, ಶೃಂಗೇರಿ, ಕಳಸ, ಸಕಲೇಶಪುರ, ಸಂತೆಬೆನ್ನೂರು 2, ಕುಂದಾಪುರ, ಭಟ್ಕಳ, ಮಂಚಿಕೇರಿ, ಯಲ್ಲಾಪುರ, ಶಿರಾಲಿ, ನಿಪ್ಪಾಣಿ, ಮುನಿರಾಬಾದ್, ಕುಷ್ಟಗಿ, ಜಮಖಂಡಿ, ಹಾರಂಗಿ, ಕುಶಾಲನಗರ, ತಾಳಗುಪ್ಪ, ತ್ಯಾಗರ್ತಿ, ಸೊರಬ, ಶಿಕಾರಿಪುರ, ಜಯಪುರ, ಕೃಷ್ಣರಾಜಸಾಗರ, ಯಲಹಂಕ, ಹರಿಹರ, ದಾವಣಗೆರೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.