ADVERTISEMENT

ಸಿಬಿಐ ತನಿಖೆಗೆ ದತ್ತ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ಬೆಂಗಳೂರು:‘ಸಾವಯವ ಕೃಷಿಗೆ ನೀಡಿರುವ ಹಣವನ್ನು ಸರ್ಕಾರ ಬಿಜೆಪಿ ಕಾರ್ಯಕರ್ತರಿಗೆ ಹಂಚುತ್ತಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಜೆಡಿಎಸ್‌ನ ವೈ.ಎಸ್.ವಿ. ದತ್ತ ಅವರು ಬುಧವಾರ ವಿಧಾನಪರಿಷತ್ತಿನಲ್ಲಿ ಒತ್ತಾಯಿಸಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಈ ಯೋಜನೆಯನ್ನು ಕೇವಲ ಆಯ್ದ ಭಾಗಗಳಲ್ಲಿ ಮಾತ್ರ ಜಾರಿಗೆ ತರಲಾಗಿದೆ. ಕರಾವಳಿ ಪ್ರದೇಶ, ಶಿವಮೊಗ್ಗ ಸೇರಿದಂತೆ ಕೆಲವೆಡೆ ಮಾತ್ರ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

ತಿಪ್ಪೆಗುಂಡಿ ಮಾಡಿಕೊಂಡು  ಸಾವಯವ ಕೃಷಿ ನಡೆಸುತ್ತಿರುವ ರೈತರಿಗೆ ಈ ಅನುದಾನ ನೀಡುತ್ತಿಲ್ಲ. ಬಿಜೆಪಿ ಜೊತೆ ಸಂಪರ್ಕ ಇಟ್ಟುಕೊಂಡಿರುವವರಿಗೆ ಮಾತ್ರ ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ ರೂ 1000 ಕೋಟಿ ಮೀಸಲು ಇಟ್ಟಿದೆ’ ಎಂದರು.

‘ಇಸ್ಕಾನ್ ಸಂಸ್ಥೆಯವರು ಸಹ ಸಾವಯವ ಕೃಷಿಗೆ ಸಹಾಯ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಗೂ ಹೋಗಿ ಸಮೀಕ್ಷೆ ಮಾಡಿ, ರೈತರು ಸಾವಯವ ಕೃಷಿ ನಡೆಸುತ್ತಿರುವ ಬಗ್ಗೆ ಖಾತ್ರಿಯಾದ ನಂತರ ಪ್ರಮಾಣಪತ್ರ ನೀಡಿ ಅವರಿಗೆ ಒಂದಿಷ್ಟು ಪ್ರೋತ್ಸಾಹ ಧನವನ್ನು ಸಂಸ್ಥೆಯೇ ನೀಡುತ್ತಿದೆ. ಆದರೆ, ಇಲ್ಲಿ ಸರ್ಕಾರ ಯಾವುದೇ ಸಮೀಕ್ಷೆ ನಡೆಸದೇ ಹಣವನ್ನು ನೀಡುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.