
ಬೆಂಗಳೂರು: ಸುಗಮ ಸಂಗೀತ ಗಾಯಕಿ ಸೋಹನ್ ಕುಮಾರಿ (86) ನಗರದಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಮೂರು ವರ್ಷಗಳಿಂದ ಅವರು ಮೈಸೂರು ರಸ್ತೆಯ ಲ್ಲಿರುವ ನಾಯಂಡಹಳ್ಳಿ ಸಮೀಪದ ಆಶ್ರಯ ಟ್ರಸ್ಟ್ ವೃದ್ಧಾ ಶ್ರಮದಲ್ಲಿ ನೆಲೆಸಿದ್ದರು. ಅದಕ್ಕೂ ಮೊದಲು ಶೇಷಾದ್ರಿಪುರ ದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪ್ರಸಿದ್ಧ ಗಾಯಕ ಪಿ.ಕಾಳಿಂಗರಾಯರ ಜೊತೆ ಹಾಡಿದ್ದ ಸೋಹನ್ ಕುಮಾರಿ ಮೂಲತಃ ರಾಜಸ್ತಾನದವರು. ಅವರ ಹಿರಿಯ ಸಹೋದರಿ ಮೋಹನ್ ಕುಮಾರಿ ಕೂಡ ಗಾಯಕಿ. ಕಾಳಿಂಗರಾಯ ಅವರಿಂದ ಕನ್ನಡ ಕಲಿತ ಇವರಿಬ್ಬರು ಹಲವು ಚಿತ್ರಗೀತೆ ಹಾಗೂ ಭಾವಗೀತೆಗಳಿಗೆ ಧ್ವನಿಯಾಗಿದ್ದರು.
ಸೋಹನ್ ಕುಮಾರಿ ಅವರಿಗೆ ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಸಂಗೀತ ನೃತ್ಯ ಅಕಾಡೆಮಿ ನೀಡುವ ‘ಕಲಾಶ್ರೀ ಪ್ರಶಸ್ತಿ’ಗೆ ಭಾಜನರಾಗಿದ್ದರು. ಮಧ್ಯಾಹ್ನ 1.30 ಗಂಟೆಗೆ ಹರಿಶ್ಚಂದ್ರ ಘಾಟ್‌ನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.