ADVERTISEMENT

ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಜೆಸಿಂತಾ: ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 10:00 IST
Last Updated 23 ಸೆಪ್ಟೆಂಬರ್ 2017, 10:00 IST
ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಜೆಸಿಂತಾ: ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿ
ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಜೆಸಿಂತಾ: ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿ   

ಉಡುಪಿ: ಏಜೆಂಟ್‌ನಿಂದ ವಂಚನೆಗೊಳಗಾಗಿ ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಮುದರಂಗಡಿಯ ಜೆಸಿಂತಾ ಅವರನ್ನು ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿಯಾಗಿದೆ.

14 ತಿಂಗಳ ನಂತರ ಕುಟುಂಬದವರನ್ನು ಭೇಟಿ ಮಾಡಿ ಭಾವುಕರಾದ ಜೆಸಿಂತಾ ಅವರು ‘ಇನ್ನು ಮುಂದೆ ಇಲ್ಲಿಯೇ ಯಾವುದೇ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಇರುತ್ತೇನೆ’ ಎಂದರು.

‘ದೇಶಕ್ಕೆ ಮರಳುವ ಭರವಸೆಯೇ ಕಳೆದುಕೊಂಡಿದ್ದ ನನಗೆ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನ್‌ಭಾಗ್ ಅವರು ಸಹಾಯ ಮಾಡಿದರು. ಅವರ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.