ಬಾಗಲಕೋಟೆ: ಜೆಡಿಎಸ್, ಜೆಡಿಯು, ಲೋಕಸತ್ತಾ ಮತ್ತು ಆಮ್ ಆದ್ಮಿ ಪಕ್ಷವು ಬೆಂಬಲಿಸಿದರೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸರ್ವ ಜನಶಕ್ತಿ ಪಕ್ಷದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
‘ಸರ್ವ ಜನಶಕ್ತಿ ಪಕ್ಷ ಇನ್ನೂ ನೋಂದಣಿಯಾಗಿಲ್ಲ. ಆದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದೇನೆ’ ಎಂದು ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೋಟು ನಿರಾಕರಿಸಬೇಡಿ: ‘ಮತದಾರರೇ, ಈ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ನೋಟು ನೀಡಿದರೂ ನಿರಾಕರಿಸಬೇಡಿ, ಪ್ರತಿ ನೋಟಿನಲ್ಲೂ ನಿಮ್ಮ ಬೆವರು, ನಿಮ್ಮ ಶ್ರಮ, ನಿಮ್ಮ ರಕ್ತ ಇದೆ. ಆದರೆ, ಭವಿಷ್ಯದಲ್ಲಿ ನಿಮ್ಮ ಪರ ಕೆಲಸ ಮಾಡಬಹುದಾದ ಸೂಕ್ತ ಅಭ್ಯರ್ಥಿಗಳಿಗೆ ಮಾತ್ರ ವೋಟ್ ಹಾಕಿ’ ಎಂದು ಅವರು ಕೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.