ADVERTISEMENT

ಸ್ವಾತಂತ್ರ್ಯಯೋಧ ದೇವಪ್ರಿಯ ಮಳೇಕರ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 20:05 IST
Last Updated 2 ಜನವರಿ 2012, 20:05 IST

ಗದಗ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಬೆಟಗೇರಿಯ ದೇವಪ್ರಿಯ ಸಾಮೇಲಪ್ಪ ಮಳೇಕರ (79) ಸೋಮವಾರ ನಿಧನ ಹೊಂದಿದರು.

ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಮುಂಜಾನೆ 10ಕ್ಕೆ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ದೇಶ ಸ್ವಾತಂತ್ರ್ಯ ಪಡೆದ ದಿನ 1947ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆ ಮೇಲೆ ಹಾರಿಸಿದ ರಾಷ್ಟ್ರಧ್ವಜವನ್ನು ಬೆಟಗೇರಿಯ ಮಳೇಕರ್ ಕುಟುಂಬದವರು ಸಿದ್ಧಪಡಿಸಿದ್ದರು. ಅವರ ದೇಶಪ್ರೇಮವನ್ನು ಮನಗಂಡು ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುತ್ತಿತ್ತು.

ನೇಕಾರಿಕೆ ಮೂಲ ವೃತ್ತಿಯಾಗಿದ್ದ ಈ ಕುಟುಂಬದವರ ಒಡೆತನದಲ್ಲಿ ಅಂದು 32 ಕುಣಿ ಮಗ್ಗಗಳಿದ್ದು, ಬಟ್ಟೆಗಳಿಗೆ ಬಣ್ಣ ಹಾಕುತ್ತಿದ್ದರು.

1928ರಲ್ಲಿನ ಸ್ವಾತಂತ್ರ್ಯ ಚಳವಳಿಯಲ್ಲಿ ದೇವಪ್ರಿಯ ಅವರ ತಂದೆ ಸಾಮೇಲಪ್ಪ ಮಳೇಕರ್ ಮತ್ತು ತಾಯಿ ಶಾಂತಾಬಾಯಿ ಮಳೇಕರ್ ಹಾಗೂ ಸಂಬಂಧಿಕರಾದ ಶಾಮ್ಯುಯೆಲ್ ಮಳೇಕರ್ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.