ADVERTISEMENT

ಹಲ್ಲೆ ಪ್ರಕರಣ: ಮೊಹಮದ್‌ ನಲಪಾಡ್ ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 30 ಮೇ 2018, 11:49 IST
Last Updated 30 ಮೇ 2018, 11:49 IST
ಹಲ್ಲೆ ಪ್ರಕರಣ: ಮೊಹಮದ್‌ ನಲಪಾಡ್ ಜಾಮೀನು ಅರ್ಜಿ ವಜಾ
ಹಲ್ಲೆ ಪ್ರಕರಣ: ಮೊಹಮದ್‌ ನಲಪಾಡ್ ಜಾಮೀನು ಅರ್ಜಿ ವಜಾ   

ಬೆಂಗಳೂರು: ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಮೊಹಮದ್‌ ನಲಪಾಡ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು  ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ 63ನೇ ಸೆಷನ್ಸ್ ನ್ಯಾಯಾಲಯ, ಆರೋಪಿ ಪರ ವಕೀಲ ಉಸ್ಮಾನ್ ಹಾಗೂ ವಿದ್ವತ್‌ ಪರ ಪ್ರಾಸಿಕ್ಯೂಟರ್ ಎಂ.ಎಸ್.ಶ್ಯಾಮಸುಂದರ್ ವಾದವನ್ನು ಮಂಗಳವಾರ ಆಲಿಸಿ, ಆದೇಶವನ್ನು ಕಾಯ್ದಿರಿಸಿತ್ತು.

ಬುಧವಾರ ಆದೇಶ ಪ್ರಕಟಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಆರೋಪಿಯು ಪ್ರಭಾವಿಯಾಗಿರುವುದಲ್ಲದೇ, ವೈದ್ಯಕೀಯ ವರದಿಗಳಲ್ಲಿ ನಲಪಾಡ್ ವಿರುದ್ಧ ಸಾಕ್ಷ್ಯಗಳು ದೊರೆತಿರುವುದರಿಂದ ಜಾಮೀನು ನಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

ಕಳೆದ 99 ದಿನಗಳಿಂದ ನಲಪಾಡ್‌ ಜೈಲಿನಲ್ಲಿದ್ದಾರೆ.

ಶ್ಯಾಮಸುಂದರ್, ‘ದೋಷಾರೋಪ ಪಟ್ಟಿ ಸಲ್ಲಿಸಿದ ಕೂಡಲೇ ಜಾಮೀನು ನೀಡಲೇಬೇಕು ಎಂದೇನಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವಷ್ಟು ಆರೋಪಿಯು ಪ್ರಬಲನಾಗಿದ್ದಾನೆ. ಪ್ರಕರಣದ ಇನ್ನೊಬ್ಬ ಆರೋಪಿ ಶ್ರೀಕೃಷ್ಣ ತಲೆಮರೆಸಿ ಕೊಂಡಿದ್ದಾನೆ. ಹೀಗಾಗಿ, ಜಾಮೀನು ನೀಡಬಾರದು’ ಎಂದು ಕೋರಿದರು.

ಉಸ್ಮಾನ್, ‘ಎದುರಾಳಿ ವಕೀಲರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ. ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಪ್ರಭಾವ ಬೀರಲು ಅವಕಾಶವೇ ಇಲ್ಲ. ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.