ADVERTISEMENT

ಹು.ಧಾ- ಇಬ್ಬರು 'ನಕಲಿ'ಗಳು: ಎಎಪಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 11:03 IST
Last Updated 23 ಮಾರ್ಚ್ 2014, 11:03 IST

ಬೆಂಗಳೂರು(ಐಎಎನ್ ಎಸ್): ಹುಬ್ಬಳ್ಳಿ–ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಹೇಮಂತ್ ಕುಮಾರ್ ಎಎಪಿಯ(ಆಮ್ ಆದ್ಮಿ ಪಾರ್ಟಿ) ಅಧಿಕೃತ ಅಭ್ಯರ್ಥಿ ಹಾಗೂ ನಾಮಪತ್ರ ಸಲ್ಲಿಸಿರುವ ಇತರ ಇಬ್ಬರು ಖೋಟಾ ಅಭ್ಯರ್ಥಿಗಳೆಂದು ಎಎಪಿ ಭಾನುವಾರ ಸ್ಪಷ್ಟಪಡಿಸಿದೆ.

‘‘ಹುಬ್ಬಳ್ಳಿ–ಧಾರವಾಡ ಕ್ಷೇತ್ರಕ್ಕೆ ಹೇಮಂತ್ ಕುಮಾರ್ ಎಎಪಿಯ ಅಧಿಕೃತ ಅಭ್ಯರ್ಥಿಯಾಗಿದ್ದು ಶನಿವಾರ ನಾಮಪತ್ರ ಸಲ್ಲಿಸಿದ ಉಳಿದ ಇಬ್ಬರು( ಸಂಜಯ್ ಕೊಠಾರಿ ಮತ್ತ ಎಸ್. ಕೆ .ಪಾಟೀಲ್) ಪಕ್ಷದವರೂ ಅಲ್ಲ ಯಾವುದೇ ಕ್ಷೇತ್ರದ ನಮ್ಮ ಅಭ್ಯರ್ಥಿಗಳೂ ಅಲ್ಲ’’ ಎಂದು ಎಎಪಿಯ ರಾಜ್ಯ ಸಹ ಸಂಘಟಕ ಎಸ್ ಹರಿಹರನ್ ತಿಳಿಸಿದರು.

ಬೆಂಗಳೂರಿನಿಂದ  430 ಕಿ.ಮೀ ದೂರದಲ್ಲಿರುವ ಧಾರವಾಡದಲ್ಲಿ ಕುಮಾರ್ ಸ್ಪರ್ಧಿಸುತ್ತಿದ್ದು ಅವರು  ಕರ್ನಾಟಕ ರಾಜ್ಯ ರೈತ ಸಂಘದ ಸ್ಥಾಪಕ ಸದಸ್ಯರಾಗಿದ್ದು ರಾಜ್ಯದ ರೈತ ಸಂಘವನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಧಾರವಾಡದಲ್ಲಿ ಚುನಾವಣಾಧಿಕಾರಿಗೆ ಕೊಠಾರಿ ಮತ್ತು ಪಾಟೀಲ್ ಎಎಪಿ ಪಕ್ಷವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿ ತಮ್ಮ ಬೆಂಬಲಿಗರೊಂದಿಗೆ ಮತಪತ್ರ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.