ADVERTISEMENT

ಹುಬ್ಬಳ್ಳಿಯಲ್ಲಿ ನಾಳೆ ಶಿಕ್ಷಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಹುಬ್ಬಳ್ಳಿ:  ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ `ರಾಜೀವ್ ಗಾಂಧಿ ಸ್ಮಾರಕ ವಿಜ್ಞಾನ ಶಿಕ್ಷಕ ಪ್ರಶಸ್ತಿ~ ಹಾಗೂ ಶೈಕ್ಷಣಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ `ವಿಶೇಷ ಶಿಕ್ಷಕರ ಪ್ರಶಸ್ತಿ~ಗೆ 2010-11ನೇ ಸಾಲಿಗೆ ಒಟ್ಟು ಹತ್ತು ಶಿಕ್ಷಕರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಇದೇ 5ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದೇ ಮೊದಲ ಬಾರಿಗೆ ಪದವಿಪೂರ್ವ ಕಾಲೇಜು ಶಿಕ್ಷಕರಿಗೂ ಪ್ರಶಸ್ತಿ ನೀಡಲಾಗುತ್ತಿದ್ದು, ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ:

ರಾಜೀವ್‌ಗಾಂಧಿ ಸ್ಮಾರಕ ವಿಜ್ಞಾನ ಶಿಕ್ಷಕ ಪ್ರಶಸ್ತಿ:
1. ಎಂ.ಎಸ್. ಪ್ರಭಾವತಿ, ತರಳಬಾಳು ಜಗದ್ಗುರು ವಸತಿಶಾಲೆ, ಅನುಭವ ಮಂಟಪ, ದಾವಣಗೆರೆ.

2. ರತ್ನ ರಾಯಚೂರ್‌ಕರ್, ಸ.ಕಿ.ಪ್ರಾ.ಶಾಲೆ. ಮಿಟ್ಟಿಮಲ್ಕಾಪುರ, ರಾಯಚೂರು.

ವೈಜ್ಞಾನಿಕ ಕ್ಷೇತ್ರಕ್ಕೆ ವಿಶೇಷ ಶಿಕ್ಷಕ ಪ್ರಶಸ್ತಿ:
ಪ್ರೌಢಶಾಲೆ: 1. ರೇಣುಕಪ್ಪ, ಜೇನುಕಲ್ಲು ಸಿದ್ಧೇಶ್ವರ ಪ್ರೌಢಶಾಲೆ, ಯಾದಾಪುರ, ಅರಸೀಕೆರೆ ತಾಲ್ಲೂಕು.

ಹಾಸನ ಜಿಲ್ಲೆ. 2. ಜಮೀಲ್ ಇಮ್ರಾನ್ ಅಹ್ಮದ್, ಸ.ಉ. ಪ್ರೌಢಶಾಲೆ, ಲಾಲಗೇರಿ ಬ್ರಹ್ಮಾಪುರ, ಗುಲ್ಬರ್ಗ.

ಪ್ರಾಥಮಿಕ ಶಾಲೆ: 1.ಗದಿಗೆಪ್ಪ ದುರುಗಪ್ಪನವರ, ಸ.ಹಿ.ಪ್ರಾ.ಶಾಲೆ, ನಂ.1, ದೇವಗಿರಿ, ಹಾವೇರಿ.

2. ಎ.ಆರ್. ಏಳಂಗಡಿ, ಕ.ಗಂ.ಮ. ಶಾಲೆ. ನಂ.28, ಟ್ರೇಝರಿ ಕಾಲೋನಿ, ವಿಜಾಪುರ.

ಶೈಕ್ಷಣಕ ಕ್ಷೇತ್ರಕ್ಕೆ ವಿಶೇಷ ಶಿಕ್ಷಕ ಪ್ರಶಸ್ತಿ:
ಪ್ರೌಢಶಾಲೆ: 1. ಮಂಜುನಾಥ, ಪೇಪರ್‌ಟೌನ್ ಪ್ರೌಢಶಾಲೆ, ಭದ್ರಾವತಿ, ಶಿವಮೊಗ್ಗ ಜಿಲ್ಲೆ.

2. ಉದಯ ಅನಂತ ನಾಯ್ಕ, ಸರ್ಕಾರಿ ಪ್ರೌಢಶಾಲೆ, ನೆಲ್ಲಿಕೇರಿ, ಕುಮಟಾ ತಾ. ಉತ್ತರ ಕನ್ನಡ ಜಿಲ್ಲೆ.

ಪ್ರಾಥಮಿಕ ಶಾಲೆ: 1. ಟಿ. ಚನ್ನಪ್ಪ, ಸ.ಹಿ.ಪ್ರಾ.ಶಾಲೆ, ಮಂಗಳವಾರಪೇಟೆ ಕಾಲೋನಿ, ಚನ್ನಪಟ್ಟಣ ತಾ.

ರಾಮನಗರ ಜಿಲ್ಲೆ. 2. ಚಂದ್ರಪ್ಪ ಜಿ. ಬ್ಯಾಡಗಿ, ಸ.ಹಿ.ಪ್ರಾ.ಶಾಲೆ. ಗಂಗನೂರು, ಹಾವೇರಿ ತಾ, ಹಾವೇರಿ ಜಿಲ್ಲೆ. 

 ಪದವಿಪೂರ್ವ ಶಿಕ್ಷಣ ವಿಭಾಗ:
ಬೆಂಗಳೂರು ವಿಭಾಗ:  ಕ್ರಿಸ್ಟಿಜಯಂ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ, ಸ.ಪ.ಪೂ.ಕಾಲೇಜು. ಕೆ.ಆರ್.ಪುರಂ. ಬೆಂಗಳೂರು.

ಮೈಸೂರು ವಿಭಾಗ:  ಅಪ್ಪಾಜಿಗೌಡ, ಕನ್ನಡ ಉಪನ್ಯಾಸಕ, ಮಹಾರಾಣಿ ಸ.ಪ.ಪೂ.ಕಾಲೇಜು, ಮೈಸೂರು.

ಗುಲ್ಬರ್ಗ ವಿಭಾಗ: ಸಂಗೀತಾ ಕಟ್ಟಿಮನಿ, ಅಥಶಾಸ್ತ್ರ ಉಪನ್ಯಾಸಕ, ಸ.ಪ.ಪೂ.ಕಾಲೇಜು. ಸೂಪರ್ ಮಾರ್ಕೆಟ್, ಗುಲ್ಬರ್ಗ.

ಬೆಳಗಾವಿ ವಿಭಾಗ:  ಎಸ್.ಕೆ. ಅಕ್ಕಿ, ಪ್ರಾಂಶುಪಾಲರು, ಸ.ಪ.ಪೂ.ಕಾಲೇಜು. ಬನವಾಸಿ, ಶಿರಸಿ ತಾ. ಉತ್ತರ ಕನ್ನಡ ಜಿಲ್ಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.