ADVERTISEMENT

‘ದಸಂಸ ಒಗ್ಗೂಡಿಸಲು ದೇವನೂರ ಮುಂದಾಗಲಿ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST
ಮೈಸೂರಿನಲ್ಲಿ ಸೋಮವಾರ ನಡೆದ 5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ‘ದಲಿತ ಕಲಾಸಿರಿ ಪ್ರಶಸ್ತಿ’ಯನ್ನು ಚಿತ್ರಕಲಾವಿದ ಬಸವರಾಜ ಜಾನೆ, ‘ಗೌರವ ಪ್ರಶಸ್ತಿ’ಯನ್ನು ಲೇಖಕಿ ಡಿ.ಜಿ. ರಜಿಯಾ, ‘ಬೃಹದ್ದೇಶಿ ಪ್ರಶಸ್ತಿ‘ಯನ್ನು ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ‘ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’ಯನ್ನು ಇಂದಿರಾ ಬಿ. ಕೃಷ್ಣಪ್ಪ, ‘ದಲಿತ ಚೇತನ ಪ್ರಶಸ್ತಿ’ಯನ್ನು ಡಿಎಸ್‌ಎಸ್‌ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಹಾಗೂ ‘ಗೌರವ ಪ್ರಶಸ್ತಿ’ಯನ್ನು ಸಾಹಿತಿ ಡಾ.ಎನ್‌. ಚಿನ್ನಸ್ವಾಮಿ ಸೋಸಲೆ ಅವರಿಗೆ ಪ್ರದಾನ ಮಾಡಲಾಯಿತು. ಡಾ.ಅರ್ಜುನ ಗೊಳಸಂಗಿ, ಡಾ.ಅರವಿಂದ ಮಾಲಗತ್ತಿ, ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ ಹಾಗೂ ಇತರರು ಇದ್ದಾರೆ

ಮೈಸೂರು: ಮಹಾತ್ಮ ಗಾಂಧೀಜಿ ಅವರ ಅನುಯಾ­ಯಿಯಾದ ಸಾಹಿತಿ ದೇವ­ನೂರ ಮಹಾದೇವ ಅವರು ಕಠೋರತೆ ಬಿಟ್ಟು, ಒಡೆದು ಹೋಗಿ­ರುವ ದಲಿತ ಸಂಘರ್ಷ ಸಮಿತಿಗಳನ್ನು (ಡಿಎಸ್‌ಎಸ್‌) ಒಂದುಗೂಡಿಸಲಿ ಎಂದು ಡಿಎಸ್‌ಎಸ್‌ ರಾಜ್ಯ ಸಂಚಾಲಕ ಲಕ್ಷ್ಮೀನಾರಾ­ಯಣ ನಾಗವಾರ ಒತ್ತಾಯಿಸಿದರು.

ದಲಿತ ಸಾಹಿತ್ಯ ಪರಿಷತ್ತು ನಗರ­ದಲ್ಲಿ ಆಯೋಜಿಸಿರುವ 5ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಸೋಮವಾರ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ದಲಿತ ಚೇತನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾ­ಡಿದರು.

‘ಡಿಎಸ್‌ಎಸ್‌ ಹುಟ್ಟುವ ಮೊದಲು ನವೋದಯ ಹಾಗೂ ನವ್ಯ ಸಾಹಿತಿಗಳ ಜತೆ ಗುರುತಿಸಿಕೊಂಡಿದ್ದ ದೇವನೂರ ಅವರು, ಈಗಲೂ ನವೋದಯ, ನವ್ಯದ ಸೆಳೆತದಲ್ಲಿಯೇ ಇದ್ದಾರೆ. ಹೀಗಾಗಿ, ದಲಿತ ಸಾಹಿತಿ­ಯಾಗಿ ಗುರು­ತಿ­­­ಸಿ­ಕೊಳ್ಳಲು ಸಂಕೋಚ­ಪಡು­ತ್ತಾರೆ. ಅಲ್ಲದೆ, ಮೇಲ್ಜಾತಿ­ಯವ­ರನ್ನು ತೃಪ್ತಿಪ­ಡಿ­ಸಲು ಹೆಚ್ಚು ಹಂಬಲಿ­ಸು­ತ್ತಾರೆ. ಮೇಲ್ಜಾ­­­ತಿಗಳ ಕಾರ್ಯ­ಕ್ರಮ­ಗ­ಳಲ್ಲಿ ಹೆಚ್ಚು ಪಾಲ್ಗೊಳ್ಳುವ ಅವರು, ಮುಂದಿನ ದಲಿತ ಸಾಹಿತ್ಯ ಸಮ್ಮೇಳನ­ದಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡಲಿ’ ಎಂದು ಅವರು ಕೋರಿದರು.

ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಯಲ್ಲಿದ್ದ ಸಾಹಿತಿಗಳು ಈಗ ಹಿರಿಯರಾಗಿದ್ದಾರೆ. ತಮ್ಮ ಹತಾಶೆ­ಗಳನ್ನು ಸಮಾಜದ ಹತಾಶೆಗಳೆಂದು ಬಿಂಬಿಸು­ತ್ತಿದ್ದಾರೆ. ದಲಿತ ಚಳವಳಿ­ಯನ್ನು ವಿಘಟಿಸುವ ಹುನ್ನಾರ ನಡೆ ಸು­ತ್ತಿ­­ದ್ದಾರೆ. ದೇವನೂರ ಅವರ ಒಡ­ನಾಡಿಗಳಾದ ಕೆ.ಬಿ. ಸಿದ್ದಯ್ಯ, ಎಚ್‌. ಗೋವಿಂದಯ್ಯ, ಕೋಟಿಗಾನಹಳ್ಳಿ ರಾಮಯ್ಯ ಅವರು ಕುಬ್ಜ ಮನಸ್ಸಿ­ನ­ವರು. ಇವರೆಲ್ಲ ಡಿಎಸ್‌ಎಸ್‌ ಒಂದಾ­ಗು­ವು­ದನ್ನು ಇಷ್ಟಪಡು­ವುದಿಲ್ಲ. ಆದರೆ, ಇವರ ಮಾತುಗಳನ್ನು ದೇವನೂರ ಅವರು ಕೇಳದಿರಲಿ ಎಂದು ನಾಗವಾರ ಮನವಿ ಮಾಡಿದರು.

ಮಲಿನಗೊಂಡ ಮನಸ್ಸುಗಳು ಹಿರಿಯ ದಲಿತ ಸಾಹಿತಿಗಳ ಕೃತಿಗಳನ್ನು ಟೀಕಿ­ಸುತ್ತಿವೆ. ಇದರಿಂದ ಹೊಸ ಪೀಳಿ­ಗೆಯ ಲೇಖಕರನ್ನು ತಪ್ಪು ದಾರಿಗೆ ಎಳೆ­ಯ­­ಲಾ­ಗುತ್ತಿದೆ ಎಂದೂ ಅವರು ವಿಷಾದ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.