
ಬೆಂಗಳೂರು: ‘ದೇಶದಲ್ಲಿ ಅಸಹಿಷ್ಣು ಮನೋಭಾವ ಬೆಳೆಯುತ್ತಿದೆ. ಈ ಹೊತ್ತಿನಲ್ಲಿ, ಬಂಡಾಯ ಸಾಹಿತ್ಯದ ಪುನರುತ್ಥಾನ ಆಗಬೇಕಿದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.
ಪ್ರೊ. ಬರಗೂರು ರಾಮಚಂದ್ರಪ್ಪ ಅವರ ‘ಭೋಗ ಭಾರತ v/s ಸುಖೀ ಭಾರತ’ ಮತ್ತು ‘ನಾಲಿಗೆಯನ್ನು ನಂಬಿದ ನಾಯಕ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಯೆಚೂರಿ, ‘ಬಂಡಾಯ ಸಾಹಿತ್ಯ ಚಳವಳಿಯಿಂದ ಪ್ರೊ. ಬರಗೂರು ಅವರು ಏಕೆ ಕಳಚಿಕೊಂಡರೋ ತಿಳಿಯದು. ಆ ಚಳವಳಿಯ ಪುನರಾರಂಭವೇ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ಸೂಚಿಸಬಹುದಾದ ಅತ್ಯುತ್ತಮ ಸಂತಾಪ’ ಎಂದರು.
‘ಈ ದೇಶಕ್ಕೆ ಹಿಂದುತ್ವ ಬೇಕೋ, ಹಿಂದ್ ಸ್ವರಾಜ್ ಬೇಕೋ ಎಂಬ ಪ್ರಶ್ನೆಯನ್ನು ಸಾಹಿತಿ ಯು.ಆರ್. ಅನಂತಮೂರ್ತಿ ಜನರ ಮುಂದಿಟ್ಟಿದ್ದರು. ಅದೇ ಮಾದರಿಯಲ್ಲಿ, ಭೋಗ ಭಾರತ ಬೇಕೋ, ಸುಖೀ ಭಾರತ ಬೇಕೋ ಎಂಬ ಪ್ರಶ್ನೆಯನ್ನು ಪ್ರೊ. ಬರಗೂರು ಜನರ ಎದುರಿಟ್ಟಿದ್ದಾರೆ’ ಎಂದು ಸಾಹಿತಿ ಡಾ. ರಹಮತ್ ತರೀಕೆರೆ ಹೇಳಿದರು.
* ಯಾರು ಏನು ತಿನ್ನಬೇಕು ಎಂಬುದನ್ನು ಇನ್ನೊಬ್ಬರು ನಿರ್ಧರಿಸುವುದು, ಹುಡುಗಿ ಯಾವ ಬಟ್ಟೆ ತೊಡಬೇಕು ಎಂಬುದನ್ನು ಅನ್ಯರು ನಿರ್ಧರಿಸುವುದಕ್ಕೆ ಸಮ.
ಸೀತಾರಾಂ ಯೆಚೂರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.