ADVERTISEMENT

‘ಬಿಸಿಯೂಟದ ಜತೆ ಶಾಲೆಗೆ ವೈದ್ಯಕೀಯ ಸೇವೆ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ಬೆಂಗಳೂರು: ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ನಿರ್ವ­ಹಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಿರ್ಧರಿ­ಸಿರುವ ಕೇಂದ್ರ ಮಾನವ ಸಂಪ­ನ್ಮೂಲ ಸಚಿವಾಲಯ, ನಿರ್ವ­ಹಣಾ ಮೊತ್ತ­ವನ್ನು ಈ ಮೊದಲಿದ್ದ ₨ 236 ಕೋಟಿ ಯಿಂದ ₨ 600 ಕೋಟಿಗೆ ಹೆಚ್ಚಿಸಿದೆ.

ಮಧ್ಯಾಹ್ನದ ಬಿಸಿಯೂಟಕ್ಕೆ ಸಂಬಂಧಿ­­ಸಿ­­ದಂತೆ ನಗರದಲ್ಲಿ ಸೋಮ­ವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ದೇಶಕ ಗಯಾ ಪ್ರಸಾದ್‌ ಮಾಧ್ಯಮ ಪ್ರತಿನಿಧಿಗಳಿಗೆ ಈ ಮಾಹಿತಿ ನೀಡಿದರು.

‘ಆಹಾರದ ಗುಣಮಟ್ಟ ಪರೀಕ್ಷಿಸಲು ಪ್ರತಿ ಶಾಲೆಗೊಂದು ಪ್ರಯೋಗಾಲ­ಯದ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಬಿಹಾರದಲ್ಲಿ ನಡೆದ ಶಾಲಾ ದುರಂತದಿಂದ ಇಲಾಖೆ­ ಎಚ್ಚೆತ್ತು­ಕೊಂಡಿದ್ದು ಮಧ್ಯಾಹ್ನದ ಬಿಸಿ­ಯೂಟದ ಜತೆಗೆ ತುರ್ತು ವೈದ್ಯಕೀಯ ಸೇವೆ­ಯನ್ನೂ ಒದಗಿಸಲು ನಿರ್ಧರಿಸಲಾಗಿದೆ. ಪ್ರತಿ­ಶಾಲೆಗೆ ವೈದ್ಯಕೀಯ ಕಿಟ್‌ ಒದಗಿಸುವುದು, ಸಂಚಾರಿ ವೈದ್ಯಕೀಯ ತಂಡದ ವ್ಯವಸ್ಥೆ ಮಾಡು­ವುದು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ­ಗಳನ್ನು ಯಾವುದೇ ಪರಿಸ್ಥಿತಿ ನಿಭಾಯಿಸಲು ಸನ್ನದ್ಧ­ವಾಗಿ ಇಡುವುದು – ಇವೇ ಮೊದಲಾದ ಸಂಗತಿ­ಗಳು ಯೋಜನೆಯಲ್ಲಿ ಸೇರಿವೆ’ ಎಂದು ವಿವರಿಸಿದರು.

‘ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ­ಯಲ್ಲಿ ನಡೆಯುವಂತೆಯೇ ಮಧ್ಯಾಹ್ನದ ಬಿಸಿ­ಯೂಟ ಯೋಜನೆ ನಿರ್ವಹಣೆಯನ್ನೂ ಸಾಮಾ­ಜಿಕ ಲೆಕ್ಕ ಪರಿ­ಶೋಧನೆಗೆ ಒಪ್ಪಿಸಲಾಗುವುದು. ಇದಕ್ಕಾಗಿ ಖಾಸಗಿ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಬಿಸಿಯೂಟದ ಅಕ್ಕಿ, ತರಕಾರಿ, ಎಣ್ಣೆ, ಉಪ್ಪು, ಸಿರಿಧಾನ್ಯಗಳ ಗುಣಮಟ್ಟವನ್ನು ಕಾಯ್ದು­ಕೊಳ್ಳಲು ಶಿಸ್ತು­ಬದ್ಧ ವಾದ ಒಂದು ವ್ಯವಸ್ಥೆಯನ್ನು ರೂಪಿ­ಸುವ ಅಗತ್ಯ ಇಲಾಖೆಗೆ ಮನವರಿ­ಕೆ­ಯಾಗಿದೆ. ಆ ನಿಟ್ಟಿನ­ಲ್ಲೂ ಪ್ರಯತ್ನ­ಗಳು ಸಾಗಿವೆ’ ಎಂದು ಸ್ಪಷ್ಟಪಡಿಸಿದರು.

‘ಶಾಲೆಗೆ ಅಡುಗೆ ಪಾತ್ರೆಗಳನ್ನು ಕೊಂಡುಕೊಳ್ಳಲು ಈಗಿರುವ ಮಿತಿ­ಯನ್ನು ₨5,000ದಿಂದ ₨ 25,000ಕ್ಕೆ ಹೆಚ್ಚಿ­ಸ­ಲಾಗಿದೆ. ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿ­ಗಳ ಸಂಖ್ಯೆಗೆ ಅನು­ಗುಣವಾಗಿ ಈ ಮೊತ್ತವನ್ನು ಬಿಡು­ಗಡೆ ಮಾಡಲಾಗುತ್ತದೆ’ ಎಂದರು.

ಕರ್ನಾಟಕ ಮುಂದು: ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿ ಕರ್ನಾಟಕ  ಮುಂಚೂಣಿಯಲ್ಲಿದ್ದು, ಉತ್ತರದ ಯಾವ ರಾಜ್ಯಗಳೊಂದಿಗೂ ಈ ರಾಜ್ಯವನ್ನು ಹೋಲಿಸುವಂತಿಲ್ಲ ಎಂದು ಗಯಾ ಪ್ರಸಾದ್‌ ಹೇಳಿದರು.

‘ದಕ್ಷಿಣದ ರಾಜ್ಯಗಳೆಲ್ಲ ಉತ್ತಮ ಸಾಧನೆಯನ್ನೇ ಮಾಡುತ್ತಿವೆ. ಅದ ರಲ್ಲೂ ತಮಿಳುನಾಡಿನ ನಂತರ ಕರ್ನಾ ಟಕ ಇದೆ’ ಎಂದು ತಿಳಿಸಿದರು.

‘ಎನ್‌ಜಿಒಗಳಿಗೆ ಅವಕಾಶವಿಲ್ಲ’
ಗ್ರಾಮಾಂತರ ಭಾಗದಲ್ಲಿರುವ ಶಾಲೆಗಳಲ್ಲಿ ಅಡುಗೆ ಕೋಣೆ ಹಾಗೂ ಪಾತ್ರೆಗಳು ಲಭ್ಯವಿದ್ದರೆ ಅಂತಹ ಶಾಲೆಗಳಿಗೆ ಆಹಾರ ಪೂರೈಸಲು ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ಗುತ್ತಿಗೆ ನೀಡಲು ಅವಕಾಶವಿಲ್ಲ ಎಂದು ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ನಿರ್ದೇಶಕರು ತಿಳಿಸಿದರು.

‘ಎನ್‌ಜಿಒಗಳು ದೂರಿದಂದ ಆಹಾರವನ್ನು ತರುವಾಗ ದಾರಿಯಲ್ಲಿ ಕೆಡುವ ಸಾಧ್ಯತೆ ಹೆಚ್ಚಾಗಿದ್ದು, ಇದೇ ಕಾರಣದಿಂದ ಗುತ್ತಿಗೆ ನೀಡದಿರಲು ನಿರ್ಧರಿಸ­ಲಾಗಿದೆ’ ಎಂದು ಸ್ಪಷ್ಟಪಡಿಸಿದರು. ‘ಅಡುಗೆ ಸೌಲಭ್ಯಗಳು ಇಲ್ಲದ ಶಾಲೆಗಳಿಗೆ ಆಹಾರ ಪೂರೈಸಲು 10 ಕಿ.ಮೀ. ವ್ಯಾಪ್ತಿಯೊಳಗೆ ಇರುವ ಎನ್‌ಜಿಒಗಳು ಗುತ್ತಿಗೆ ನೀಡಲು ಅವಕಾಶ ಇದೆ’ ಎಂದು ಹೇಳಿದರು.

ಗೌರವಧನ ಹೆಚ್ಚಳ
‘ಅಡುಗೆ ಸಿದ್ಧಪಡಿಸುವವರು ಮತ್ತು ಸಹಾಯಕರಿಗೆ ನೀಡುತ್ತಿದ್ದ ಗೌರವ­ಧನವನ್ನು ₨ 1,000ದಿಂದ ₨ 2,000ಕ್ಕೆ ಹೆಚ್ಚಿಸಲು ನಿರ್ಧರಿ ಸಲಾಗಿದೆ.

ಯೋಜನೆ ನಿರ್ವಹಣಾ ಸಮಿತಿಯ ಈ ನಿರ್ಧಾರವನ್ನು ಸಂಪುಟದ ಒಪ್ಪಿಗೆಗಾಗಿ ಕಳುಹಿಸ­ಲಾಗಿದೆ’ ಎಂದು ಗಯಾ ಪ್ರಸಾದ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.