ADVERTISEMENT

‘ಬೆಳೆಗೆ ನೀರಿಲ್ಲ: ಕುಡಿಯುವ ನೀರಿಗೆ ತೊಂದರೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 19:54 IST
Last Updated 16 ಜನವರಿ 2016, 19:54 IST
‘ಬೆಳೆಗೆ ನೀರಿಲ್ಲ: ಕುಡಿಯುವ ನೀರಿಗೆ ತೊಂದರೆ ಇಲ್ಲ’
‘ಬೆಳೆಗೆ ನೀರಿಲ್ಲ: ಕುಡಿಯುವ ನೀರಿಗೆ ತೊಂದರೆ ಇಲ್ಲ’   

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ಬೇಸಿಗೆ ಬೆಳೆಗೆ ನೀರು ಬಿಡುವುದಿಲ್ಲ. ಆದರೆ, ಬೆಂಗಳೂರು, ಮೈಸೂರು, ಮಂಡ್ಯ ನಗರಗಳ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂದು ವಸತಿ ಸಚಿವ ಅಂಬರೀಷ್‌್ ಹೇಳಿದರು.

ಜಿಲ್ಲೆಯ ಕೆಆರ್ಎಸ್‌ನಲ್ಲಿ ಶನಿವಾರ ನಡೆದ ಕಾವೇರಿ ಸಲಹಾ ಸಮಿತಿ ಸಭೆಯ ನಂತರ ಅವರು ಈ ಮಾಹಿತಿ ನೀಡಿದರು.

ಅಣೆಕಟ್ಟೆಯಲ್ಲಿ 18 ಟಿಎಂಸಿ ಅಡಿ ನೀರು ಇರುವುದರಿಂದ ಬೇಸಿಗೆ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲ. ಅಣೆಕಟ್ಟೆಯಲ್ಲಿರುವ ನೀರಿನ ಪೈಕಿ 4.4 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗೆಂದು ಕಾಯ್ದಿರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಈಗ ಬೆಳೆದು ನಿಂತಿರುವ ಬೆಳೆಗೆ ಕಟ್ಟು ಪದ್ಧತಿಯಲ್ಲಿ ನೀರು ಬಿಡಲಾಗುವುದು. ಹೊಸದಾಗಿ ಯಾವುದೇ ಬೆಳೆ ಬಿತ್ತನೆ ಮಾಡಬಾರದು ಎಂದು ಅವರು ರೈತರಲ್ಲಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.