ADVERTISEMENT

‘ಮೋದಿ ಪ್ರಧಾನಿಯಾದರೆ ಮುಖಾಮುಖಿಯಾಗೋಣ-’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಮೈಸೂರು: ‘ಮೋದಿ ಪ್ರಧಾನಿಯಾಗುವ ಕಾಲಕ್ಕೆ ಬದುಕಿರಲಾರೆ ಎಂದು ಹಿರಿಯ ಸಾಹಿತಿ ಯು.ಆರ್‌. ಅನಂತಮೂರ್ತಿ ಹೇಳಿರುವ ಮಾತು ಭಾವೋದ್ವೇಗದ. ಜತೆಗೆ ಅದು ಉಗ್ರವಾದ ವಿಷಾದವನ್ನು ಒಳಗೊಂಡ ನಿಲುವು. ಒಂದು ವೇಳೆ ಮೋದಿ ಪ್ರಧಾನಿಯಾದರೆ ನಮ್ಮ ಸೈದ್ಧಾಂತಿಕ ನೆಲೆಯಲ್ಲಿ ಅವರನ್ನು ಮುಖಾಮುಖಿ­ಯಾಗಿ ಎದುರಿಸಬೇಕು. ಹೀಗಾಗಿ ಬದುಕಿರಬಾರದು ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಕೃತಿಯೊಂದರ ಬಿಡುಗಡೆಗೆ  ನಗರಕ್ಕೆ ಗುರುವಾರ ಬಂದಿದ್ದ ಅವರು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ­ದರು. ‘ಬೆಂಗಳೂರಿನಲ್ಲಿ ಭಾನುವಾರ ನಡೆದ ನನ್ನ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅನಂತಮೂರ್ತಿಯವರು ಪ್ರಾಸಂಗಿಕ ವಾಗಿ ಮೋದಿ ವಿಷಯ ಪ್ರಸ್ತಾಪಿಸಿದರು. ನಮ್ಮ ದೇಶ ಹೇಗಿರಬೇಕು ಎನ್ನುವುದರ ಕುರಿತು ಅವರು ಹೇಳಿದ್ದರು. ಮಹಾತ್ಮ ಗಾಂಧಿ ಕನಸಿನ ಭಾರತ ಹಾಗೂ ನೆಹರೂ ಕಂಡ ಭಾರತ ನಮ್ಮ ದಾಗಬೇಕು. ಆದರೆ ಮೋದಿ ಪ್ರಧಾನಿ ಯಾದರೆ ಗಾಂಧಿ ಕನಸಿನ ಭಾರತ ನಾಶವಾಗು ತ್ತದೆ ಎಂಬ ಆತಂಕದಲ್ಲಿ ಅನಂತಮೂರ್ತಿ ಹಾಗೆ ಹೇಳಿದರು. ಅವರ ಮಾತಲ್ಲಿ ನೋವಿತ್ತು, ವಿಷಾದವೂ ಬೆರೆತಿತ್ತು’ ಎಂದರು

ಅಭಿರುಚಿಹೀನ ಹೋಲಿಕೆ: ‘ಅನಂತ ಮೂರ್ತಿಯವರನ್ನು ಪೂನಂ ಪಾಂಡೆಗೆ ಹೋಲಿ ಸಿದ ಬಿಜೆಪಿಯ ರಾಜ್ಯ ವಕ್ತಾರ ಆಯನೂರು ಮಂಜುನಾಥ್‌ ಅವರ ಮಾತು ಅಭಿ ರುಚಿಹೀನವಾ­ದುದು. ಸಾಂಸ್ಕೃತಿಕ ಲೋಕದಲ್ಲಿರುವ­ವರನ್ನು, ಸಾಹಿತ್ಯ ಲೋಕದಲ್ಲಿ ಇರುವವರನ್ನು ಪೂನಂ ಪಾಂಡೆಯಂಥವರಿಗೆ ಹೋಲಿಸ­ಬಾರದು’ ಎಂದರು.

‘ಮೋದಿ ಅಭಿವೃದ್ಧಿ ಮಾದರಿ ನಮ್ಮ ಭಾರತಕ್ಕೆ ಅಂತಿಮವಲ್ಲ. ಬಹು­ರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕಿದ್ದಾರೆ ಅಷ್ಟೆ, ಆದರೆ ಮಾನವ ಅಭಿವೃದ್ಧಿಯಾಗಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಗುಜರಾತ್‌ ದೇಶದಲ್ಲಿ 13ನೇ ಸ್ಥಾನದಲ್ಲಿದೆ. ಅಲ್ಲಿಯ ಶೇ 44 ರಷ್ಟು ಮಕ್ಕಳು ಅಪೌಷ್ಟಿತೆಯಿಂದ ನರಳುತ್ತಿದ್ದಾರೆ. ಸಮಾಜ ಕಲ್ಯಾಣದಲ್ಲಿ ಗುಜ ರಾತ್‌ 17ನೇ ಸ್ಥಾನದಲ್ಲಿದೆ ಎಂದು ಯೋಜನಾ ಆಯೋಗವೇ ತಿಳಿಸಿದೆ. ಹೀಗಾಗಿ ಏಕ ಮುಖ ಅಭಿವೃದ್ಧಿ ಬದಲು ಬಹುರೂಪಿ ಅಭಿವೃದ್ಧಿ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪೆನಿಯ ಬಂಡವಾಳ ಭಾಗ್ಯ ಬೇಕಿಲ್ಲ. ಬಡವರಿಗೆ ಅನ್ನ ಬೇಕು. ಮುಖ್ಯವಾಗಿ ಅಲ್ಲಿಯ ದಲಿತರ, ಮಹಿಳೆಯರ ಅಭಿವೃದ್ಧಿಯಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.