ADVERTISEMENT

‘ಶ್ರೀ ಸಾಹಿತ್ಯ ಪ್ರಶಸ್ತಿ’ಗೆ ಕವಿ ಲಕ್ಷ್ಮೀನಾರಾಯಣ ಭಟ್ಟ ಆಯ್ಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2014, 19:30 IST
Last Updated 3 ಫೆಬ್ರುವರಿ 2014, 19:30 IST

ಬೆಂಗಳೂರು: ಬಿ.ಎಂ.ಶ್ರೀ ಸ್ಮಾರಕ ಪ್ರತಿ­ಷ್ಠಾ­ನದ ‘ಶ್ರೀ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಕವಿ ಡಾ.ಎನ್.ಎಸ್.­ಲಕ್ಷ್ಮೀನಾರಾ­­ಯಣ ಭಟ್ಟ ಅವರು ಆಯ್ಕೆಯಾಗಿದ್ದಾರೆ.

ಬಿ.ಎಂ.ಶ್ರೀಕಂಠಯ್ಯ ಅವರ ಮೊಮ್ಮ­ಗಳು ಕಮಲಿನಿ ಶಾ.ಬಾಲೂ­ರಾವ್ ಅವರು ಇತ್ತೀಚೆಗೆ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿರುವ ಸಾಹಿತಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ.

ರೂ 1 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳ­ಗೊಂಡಿ­ದೆ ಎಂದು ಅಧ್ಯಕ್ಷ ಡಾ.ಪಿ.ವಿ.­ನಾರಾ­ಯಣ ಪ್ರಕಟಣೆ­ಯಲ್ಲಿ ತಿಳಿಸಿ­ದ್ದಾರೆ. ಸಾಹಿತಿಗಳಾದ ಡಾ.ಸಿದ್ದ­ಲಿಂಗ ಪಟ್ಟಣ­­ಶೆಟ್ಟಿ, ಡಾ.ತಾಳ್ತಜೆ ವಸಂತ­ಕುಮಾರ್‌, ಡಾ.ಎನ್.ಎಸ್.­ತಾರಾ­ನಾಥ, ಪ್ರೊ.ಎಸ್.ಜಿ.­ಸಿದ್ದ­ರಾಮಯ್ಯ, ಡಾ.ವಿಜಯಾ ಆಯ್ಕೆ ಸಮಿತಿ­ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.