ADVERTISEMENT

‘ಸಂತೋಷದ ಜೊತೆಗೆ ಅಳುಕು’

​ಪ್ರಜಾವಾಣಿ ವಾರ್ತೆ
Published 13 ಜೂನ್ 2015, 19:30 IST
Last Updated 13 ಜೂನ್ 2015, 19:30 IST

ಸಾಗರ: ‘ಪ್ರಶಸ್ತಿ ಬಂದಿರುವುದು ಸಂತೋಷ ತಂದಿರುವುದರ ಜೊತೆಗೆ ನನಗಿಂತ ಅರ್ಹರಿಗೆ ಪ್ರಶಸ್ತಿ ತಪ್ಪಿರ ಬಹುದೇನೋ’ ಎನ್ನುವ ಅಳುಕು ಕೂಡ ಕಾಡುತ್ತಿದೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ರಾದ ರಂಗಕರ್ಮಿ ಹೆಗ್ಗೋಡಿನ ನೀನಾಸಂನ ಅಕ್ಷರ ಕೆ.ವಿ. ಪ್ರತಿಕ್ರಿ ಯಿಸಿದ್ದಾರೆ.

ಭಾರತದಲ್ಲಿ ಹಲವು ಭಾಷೆ, ಸಂಸ್ಕೃತಿ ಗಳು ಇವೆ. ಅದೇ ರೀತಿ ಅನೇಕ ಪ್ರಕಾರ ಗಳ ನೃತ್ಯ, ರಂಗಭೂಮಿ, ಬಯಲಾಟ ಸೇರಿದಂತೆ ಹಲವು ಕಲೆಗಳು ಇವೆ. ಈ ಕಲಾ ಕ್ಷೇತ್ರಗಳಲ್ಲಿ ಅಸಂಖ್ಯಾತ ಜನರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ 300 ಕಲಾವಿದರಿಗೆ ಪ್ರಶಸ್ತಿ ನೀಡಿದರೂ ಅರ್ಹರು ಇನ್ನೂ ಉಳಿಯುತ್ತಾರೆಂದರು.

ಮುಜುಗರ ತಪ್ಪಿಸಬೇಕು: ಪ್ರಶಸ್ತಿ ಪುರಸ್ಕೃತರಾದ ಚಿದಂಬರರಾವ್‌ ಜಂಬೆ ಪ್ರತಿಕ್ರಿಯಿಸಿ ‘ಪ್ರಶಸ್ತಿ ಬಂದಿರುವುದು ಸಹಜವಾಗಿ ಸಂತಸ ತಂದಿದೆ. ಆದರೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಯಂತಹ ಜವಾಬ್ದಾರಿಯುತ ಸಂಸ್ಥೆ ಪ್ರಶಸ್ತಿ ನೀಡುವಾಗ ಪ್ರಾದೇಶಿಕ ಹಾಗೂ ಸಮುದಾಯದ ಸಮತೋಲನವನ್ನು ಕಾಪಾಡಬೇಕು.

ಒಂದೇ ಪ್ರದೇಶದ, ಒಂದೇ ಸಮು ದಾಯಕ್ಕೆ ಸೇರಿದವರಿಗೆ ಪ್ರಶಸ್ತಿ ನೀಡುವುದರಿಂದ ಸಂಭ್ರಮಕ್ಕೆ ಸ್ವಲ್ಪ ಮಟ್ಟಿಗೆ ಮುಜುಗರ ಉಂಟಾಗುತ್ತದೆ. ಇದನ್ನು ಅಕಾಡೆಮಿ ತಪ್ಪಿಸಬಹುದಿತ್ತು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.