ADVERTISEMENT

‘ರಸ್ತೆ ಅನುದಾನಕ್ಕೆ 14 ವರ್ಷ ಬೇಕು’

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:31 IST
Last Updated 4 ಜುಲೈ 2018, 19:31 IST

ಬೆಂಗಳೂರು: ‘ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ₹7,000 ಕೋಟಿ ಸಿಆರ್‌ಎಫ್‌ ಅನುದಾನ ನೀಡಲು ಕೇಂದ್ರ ಸರ್ಕಾರದ ಈಗಿನ ನೀತಿಯ ಪ್ರಕಾರ 14 ವರ್ಷಗಳು ಬೇಕಾಗುತ್ತದೆ. ಹೀಗಾದರೆ ನಾವು ಯಾವ ಕೆಲಸ ಮಾಡಲು ಆಗುತ್ತೆ ಸ್ವಾಮಿ?’

ಲೋಕೋಪಯೋಗಿ ಸಚಿವ ರೇವಣ್ಣ, ಬಿಜೆಪಿ ಸದಸ್ಯರ ಮುಂದಿಟ್ಟ ಪ್ರಶ್ನೆ ಇದು. ‘ಕೇಂದ್ರದಿಂದ ರಸ್ತೆ ಅಭಿವೃದ್ಧಿಗೆ ಈ ಹಿಂದಿನಕ್ಕಿಂತ ಈಗ ಹೆಚ್ಚು ಹಣ ಬರುತ್ತಿದೆ’ ಎಂಬ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದರು.

‘₹2,500 ಕೋಟಿ ಮೊತ್ತದ ಕಾಮಗಾರಿಗೆ ಕಾರ್ಯದ ಆದೇಶ ನೀಡಲಾಗಿದೆ. ಕೇಂದ್ರ ಸರ್ಕಾರ ಪ್ರತಿವರ್ಷ ಬಿಡುಗಡೆ ಮಾಡುವುದು ಬರೀ ₹ 500 ಕೋಟಿ ’ ಎಂದು ರೇವಣ್ಣ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.