ADVERTISEMENT

22 ಅಭ್ಯರ್ಥಿಗಳಿಂದ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣೆ ಪ್ರಕ್ರಿಯೆ ಬುಧವಾರ ಆರಂಭವಾಗಿದೆ. ಮೊದಲ ದಿನ 22 ಅಭ್ಯರ್ಥಿಗಳು ಒಟ್ಟು 32 ನಾಮಪತ್ರಗಳನ್ನು ಸಲ್ಲಿಸಿ­ದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಕೆ.ಎಚ್‌.­ಮುನಿ­ಯಪ್ಪ (ಕೋಲಾರ), ಬಿಜೆಪಿಯಿಂದ ಅನಂತಕುಮಾರ್ (ಬೆಂಗ­ಳೂರು ದಕ್ಷಿಣ), ಶೋಭಾ ಕರಂದ್ಲಾಜೆ (ಉಡುಪಿ – ಚಿಕ್ಕಮ­ಗಳೂರು), ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ (ತುಮಕೂರು) ನಾಮಪತ್ರ ಸಲ್ಲಿಸಿದ ಪ್ರಮುಖ­ರಾಗಿದ್ದಾರೆ.

ಬಿಜೆಪಿಯ ಪಿ.ಸಿ.ಮೋಹನ್‌ (ಬೆಂಗ­ಳೂರು ಕೇಂದ್ರ), ಕಾಂಗ್ರೆಸ್‌ನ ವಿ.ಮಂಜು­ನಾಥ ಭಂಡಾರಿ (ಶಿವಮೊಗ್ಗ) ಅವರೂ ಬುಧ­ವಾರ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ­ಯಾಗಿ ಬಾಗಲಕೋಟೆ ಕ್ಷೇತ್ರದಲ್ಲಿ ನಿವೃತ್ತ ಪೊಲೀಸ್‌ ಮಹಾ­ನಿರ್ದೇಶಕ ಶಂಕರ ಬಿದರಿ, ಹಾಸನದಲ್ಲಿ ಸಾಮಾಜಿಕ ಕಾರ್ಯ­ಕರ್ತ ಟಿ.ಜೆ.ಅಬ್ರಹಾಂ ಕಣಕ್ಕೆ ಇಳಿದಿದ್ದಾರೆ. ಭಾನುವಾರ (ಮಾ.23) ಹೊರತುಪಡಿಸಿ ನಾಮಪತ್ರ ಸಲ್ಲಿಕೆಗೆ ಇನ್ನೂ ಆರು ದಿನ ಕಾಲಾವಕಾಶ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT