ADVERTISEMENT

29ರಂದು ಕೌನ್ಸೆಲಿಂಗ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಇದೇ 29ರಂದು ಮುಂದುವರಿದ ಕ್ಯಾಷುವಲ್ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ. ಕೆಲವರು ಸೀಟುಗಳನ್ನು ಹಿಂತಿರುಗಿಸಿರುವುದರಿಂದ ತೆರವಾಗಿರುವ ಸೀಟುಗಳ ಭರ್ತಿಗೆ ಕೌನ್ಸೆಲಿಂಗ್ ನಡೆಯಲಿದೆ.

ಎರಡು ಕಡೆ ಪ್ರವೇಶ ಪಡೆದು ಇದುವರೆಗೆ ಸೀಟು ವಾಪಸ್ ಮಾಡದೆ ಇರುವ ವಿದ್ಯಾರ್ಥಿಗಳು ಇದೇ 28ರ ಒಳಗೆ ಸೀಟು ಹಿಂತಿರುಗಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮನವಿ ಮಾಡಿದೆ.

ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳ ಪ್ರವೇಶಕ್ಕೆ ಮುಂದುವರಿದ ಕ್ಯಾಷುವಲ್ ಸುತ್ತಿನ ಕೌನ್ಸೆಲಿಂಗ್ ಇದೇ 30 ಮತ್ತು ಅ.1ರಂದು ನಡೆಯಲಿದೆ. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಅಥವಾ ಒಂದೇ ಕೋರ್ಸ್‌ಗೆ ಎರಡು ಕಡೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಒಂದು ಸೀಟು ಉಳಿಸಿಕೊಂಡು ಮತ್ತೊಂದು ಸೀಟು ಹಿಂತಿರುಗಿಸಿದರೆ, ಬೇರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಂಡು ಸೀಟು ಹಿಂತಿರುಗಿಸಬೇಕು ಎಂದು ಪ್ರಾಧಿಕಾರ ವಿನಂತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.