ADVERTISEMENT

ಕೋವಿಡ್ ಕೆಲಸದಲ್ಲಿದ್ಧಾಗ ಮೃತಪಟ್ಟರೆ ಅನುದಾನಿತ ಶಿಕ್ಷಕರಿಗೆ ₹30 ಲಕ್ಷ ಪರಿಹಾರ 

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 13:27 IST
Last Updated 30 ಏಪ್ರಿಲ್ 2021, 13:27 IST
   

ಬೆಂಗಳೂರು: ಕೋವಿಡ್–19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಂಬಂಧ ಕೆಲಸದಲ್ಲಿ ತೊಡಗಿರುವ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ನೌಕರರು ಮೃತಪಟ್ಟರೆ ಅಂತಹವರ ಕುಟುಂಬಕ್ಕೆ ನೀಡುವ ₹ 30 ಲಕ್ಷ ವಿಮಾ ಮೊತ್ತವನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಕೋವಿಡ್ ಕೆಲಸದಲ್ಲಿ ಭಾಗಿಯಾಗಿರುವ ಅನಿದಾನಿತ ಶಾಲಾ ಶಿಕ್ಷಕರು ಮೃತಪಟ್ಟರೆ ಅಂತಹ ಪರಿಹಾರ ಪ್ರಸ್ತಾವನೆಯಲ್ಲಿ ಸಕ್ಷಮ ಪ್ರಾಧಿಕಾರ (ಇಲಾಖಾ ಮುಖ್ಯಸ್ಥರು, ಸಂಬಂಧಪಟ್ಟ ಜಿಲ್ಲಾಧಿಕಾರಿ ಅಥವಾ ಆಯುಕ್ತರು ಬಿಬಿಎಂಪಿ)ದಿಂದ ಪಡೆದಕೋವಿಡ್ ಕೆಲಸಕ್ಕೆ ನಿಯೋಜಸಲ್ಪಟ್ಟ ಪ್ರತಿ ಇದ್ದಲ್ಲಿ ಮಾತ್ರ ಪರಿಗಣಿಸಬಹುದು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT