ADVERTISEMENT

ದೇವೇಗೌಡರ ಕುಟುಂಬದಿಂದ ಅತಿರುದ್ರ ಮಹಾಯಾಗ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST

ಶೃಂಗೇರಿ: ಕುಟುಂಬದ ಹಿತಕ್ಕಾಗಿ ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ಮಾಡಲು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರು ನಿರ್ಧರಿಸಿದ್ದು, ಅವರ ಕುಟುಂಬ ಬುಧವಾರದಿಂದ 12 ದಿನ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಲಿದೆ.

ದೇವೇಗೌಡ, ಪತ್ನಿ ಚೆನ್ನಮ್ಮ ಹಾಗೂ ಪುತ್ರ ರೇವಣ್ಣ ಅವರು ಇಲ್ಲಿನ ಶಾರದಾ ಮಠಕ್ಕೆ ಮಂಗಳವಾರ ಭೇಟಿ ನೀಡಿ ನರಸಿಂಹವನದ ಗುರು ನಿವಾಸದಲ್ಲಿ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಸ್ವಾಮೀಜಿ ಅವರ ಆರ್ಶೀವಚನ ಪಡೆದರು.

‘ಶಾರದಾ ಮಠದಲ್ಲಿ 12 ದಿನ ಕುಟುಂಬದ ಹಿತಕ್ಕಾಗಿ ಅತಿರುದ್ರ ಮಹಾಯಾಗ ಮಾಡಲು ನಿಶ್ಚಯಿಸಿದ್ದೇವೆ’ ಎಂದು ಎಚ್‌.ಡಿ.ರೇವಣ್ಣ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.