ADVERTISEMENT

ಸಂತ ಸೇವಾಲಾಲ್‌ ಮಠಕ್ಕೆ ಶಾಲಾ ಜಮೀನು ಹಸ್ತಾಂತರ: ವಿರೋಧ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST

ನ್ಯಾಮತಿ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ದಾನ ನೀಡಿರುವ ಚಿನ್ನಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೂರಗೊಂಡನಕೊಪ್ಪದ (ಸ.ನಂ. 219) ಜಮೀನನ್ನು ಸಂತ ಸೇವಾಲಾಲ್ ಪ್ರತಿಷ್ಠಾನಕ್ಕೆ ಹಸ್ತಾಂತರ ಮಾಡಬಾರದು ಎಂದು ಒತ್ತಾಯಿಸಿ ಎಸ್‌ಡಿಎಂಸಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ತಹಶೀಲ್ದಾರ್ ಎನ್.ಜೆ.ನಾಗರಾಜ್‌ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

ಸರ್ಕಾರಿ ಶಾಲೆಗೆ ಯಾವುದೇ ಆಸ್ತಿ ಇಲ್ಲದೇ ಇರುವುದನ್ನು ಮನಗಂಡು ಹಲವು ವರ್ಷ ಹಿಂದೆ ಸೂರಗೊಂಡನಕೊಪ್ಪದ ದಾನಿಯೊಬ್ಬರು ಸುಮಾರು 15.11 ಎಕರೆ ಜಮೀನಿನನ್ನು ದಾನವಾಗಿ ನೀಡಿ, ಅದರ ಉತ್ಪನ್ನದಲ್ಲಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಕೈಗೊಳ್ಳುವಂತೆ ದಾನಪತ್ರ ಬರೆದು ಕೊಟ್ಟಿದ್ದಾರೆ. ಅದರಿಂದ ಬರುವ ಉತ್ಪನ್ನ ಮಾರಾಟದಿಂದ ಶಾಲೆಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದವು. ಆದರೆ, ಸಚಿವ ಸಂಪುಟ ಸಭೆಯಲ್ಲಿ ಈ ಜಾಗವನ್ನು ಸೇವಾಲಾಲ್‌ ಟ್ರಸ್ಟ್‌ಗೆ ಹಸ್ತಾಂತರ ಮಾಡಲು ತೀರ್ಮಾನಿಸಿರುವುದು ಸರಿಯಲ್ಲ ಎಂದು ತಹಶೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT