ADVERTISEMENT

ಬಶೀರ್ ಹತ್ಯೆ: ಮಾರಕಾಸ್ತ್ರಗಳಿಗಾಗಿ ನೇತ್ರಾವತಿ ನದಿಯಲ್ಲಿ ಶೋಧ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 9:07 IST
Last Updated 10 ಜನವರಿ 2018, 9:07 IST
ಅಬ್ದುಲ್ ಬಶೀರ್
ಅಬ್ದುಲ್ ಬಶೀರ್   

ಮಂಗಳೂರು: ಆಕಾಶಭವನ ನಿವಾಸಿ ಅಬ್ದುಲ್ ಬಶೀರ್ ಅವರನ್ನು ಕೊಲೆ ಮಾಡಲು ಬಳಸಿದ್ದ ಮಾರಕಾಸ್ತ್ರಗಳ ಪತ್ತೆಗಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಶೋಧ ನಡೆಸುತ್ತಿದ್ದಾರೆ.

ಕಳೆದ ಬುಧವಾರ (ಜ.3ರಂದು) ರಾತ್ರಿ ವೇಳೆ ಬಶೀರ್ ಮೇಲೆ ಕೊಟ್ಟಾರ ಚೌಕಿ ಬಳಿ ದಾಳಿ ಮಾಡಿ, ಹಲ್ಲೆ ನಡೆಸಿದ ಬಳಿಕ ಮಾರಕಾಸ್ತ್ರಗಳನ್ನು ಸೇತುವೆ ಬಳಿ ನದಿಗೆ ಎಸೆದಿರುವುದಾಗಿ ಆರೋಪಿಗಳು ಹೇಳಿದ್ದಾರೆ.

ಬಂಧಿತ ಆರೋಪಿಗಳಾದ ಪಿ.ಕೆ.ಶ್ರೀಜಿತ್, ಧನುಷ್ ಪೂಜಾರಿ, ಕಿಶನ್ ಪೂಜಾರಿ ‌ಮತ್ತು ಸಂದೇಶ್ ಕೋಟ್ಯಾ‌ನ್‌ ಅವರನ್ನು ಸ್ಥಳಕ್ಕೆ ಕರೆದೊಯ್ದಿರುವ‌ ಸಿಸಿಆರ್‌ಬಿ ಎಸಿಪಿ‌ ವೆಲೆಂಟೈನ್ ಡಿಸೋಜ ನೇತೃತ್ವದ ತನಿಖಾ ತಂಡ ನದಿಯಲ್ಲಿ ಶೋಧ ನಡೆಸುತ್ತಿದೆ. ಮುಳುಗು‌ ತಜ್ಞರು ನದಿಯಲ್ಲಿ ತಲವಾರುಗಳಿಗಾಗಿ‌ ಹುಡುಕಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.