ADVERTISEMENT

ಸರೋದ್‌ ಮಾಂತ್ರಿಕ ಬುದ್ಧದೇವ್‌ ದಾಸಗುಪ್ತಾ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಸರೋದ್‌ ಮಾಂತ್ರಿಕ ಬುದ್ಧದೇವ್‌ ದಾಸಗುಪ್ತಾ
ಸರೋದ್‌ ಮಾಂತ್ರಿಕ ಬುದ್ಧದೇವ್‌ ದಾಸಗುಪ್ತಾ   

ಕೋಲ್ಕತ್ತ : ಸರೋದ್‌ ವಾದಕ ಪಂಡಿತ್‌ ಬುದ್ಧದೇವ್‌ ದಾಸ್‌ಗುಪ್ತಾ (84) ಸೋಮವಾರ ತೀವ್ರ ಹೃದಯಾಘಾತದಿಂದ  ನಿಧನರಾದರು.

ದಾಸ್‌ಗುಪ್ತಾ ಅವರು ಕೆಲವು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದರು ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಬಿಹಾರನ ಭಾಗಲ್ಪುರ್‌ದಲ್ಲಿ 1933ರಲ್ಲಿ ಜನಿಸಿದ್ದ ಬುದ್ಧದೇವ್‌ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪದ್ಮಭೂಷಣ, ಸಂಗೀತ್‌ ಮಹಾಸಮ್ಮಾನ್‌ ಹಾಗೂ ಬಂಗಾಬಿಭೂಷಣ್‌ ಪ್ರಶಸ್ತಿಗಳನ್ನು ಪಡೆದಿದ್ದರು.

ADVERTISEMENT

ಮಾಜಿ ಕೇಂದ್ರ ಸಚಿವ ರಘುನಾಥ್ ಝಾ ನಿಧನ

ನವದೆಹಲಿ (ಪಿಟಿಐ): ಕೇಂದ್ರದ ಮಾಜಿ ಸಚಿವ ರಘುನಾಥ್ ಝಾ (79) ಅವರು ಸೋಮವಾರ ನಿಧನರಾದರು.

ಅಂಗಾಂಗ ವೈಫಲ್ಯ, ಹೃದಯಾಘಾತ ಹಾಗೂ ವಿಷರಕ್ತ ಆಘಾತದಿಂದ ಇಲ್ಲಿನ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3.10ಕ್ಕೆ ಅವರು ನಿಧನರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮನಮೋಹನ್‌ ಸಿಂಗ್‌ ಆಡಳಿತದ ಯುಪಿಎ ಸರ್ಕಾರದಲ್ಲಿ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಇಲಾಖೆಯ ಸಚಿವರಾಗಿ ಝಾ ಅವರು ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.