ADVERTISEMENT

'ಮಹದಾಯಿ: ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ- ಜಗದೀಶ‌ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 11:07 IST
Last Updated 16 ಜನವರಿ 2018, 11:07 IST
'ಮಹದಾಯಿ: ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ- ಜಗದೀಶ‌ ಶೆಟ್ಟರ್
'ಮಹದಾಯಿ: ಪ್ರಧಾನಿ ಮಧ್ಯಪ್ರವೇಶ ಅಸಾಧ್ಯ- ಜಗದೀಶ‌ ಶೆಟ್ಟರ್   

ಹುಬ್ಬಳ್ಳಿ: ಮಹದಾಯಿ ‌ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ‌ಮಾಡುವುದು‌‌ ಅಸಾಧ್ಯ ಎಂದು ವಿಧಾನಸಭೆ ವಿರೋಧ ‌ಪಕ್ಷದ‌ ನಾಯಕ‌ ಜಗದೀಶ‌ ಶೆಟ್ಟರ್ ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ರಾಜ್ಯ‌ ಕಾಂಗ್ರೆಸ್ ‌ನಾಯಕರು ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸುವತನಕ ವಿವಾದ ಇತ್ಯರ್ಥ ಆಗುವುದಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಲ್ಲಿ ‌ರಾಜಕಾರಣ‌‌ ಮಾಡುತ್ರಿದ್ದಾರೆ‌ ಎಂದು ಟೀಕಿಸಿದರು.

ಇಂದಿರಾಗಾಂಧಿ, ವಾಜಪೇಯಿ ಅವರು ಹಲವು ‌ನದಿ‌ ವಿವಾದಗಳನ್ನು ‌ಬಗೆಹರಿಸಿದ್ದಾರೆ‌ ಎಂಬುದು ‌ನಿಜ.‌ಆದರೆ‌‌ ಇಂದಿನ ‌ಪರಿಸ್ಥಿತಿ ಬೇರೆಯೇ ಆಗಿದೆ. ಮನಮೋಹನ್ ಸಿಂಗ್ ಪ್ರದಾನಿ‌ ಆಗಿದ್ದಾಗ ತಮ್ಮಿಂದ ವಿವಾದ ಇತ್ಯರ್ಥ ‌ಕಷ್ಟ ಎನಿಸಿದ್ದರಿಂದಲೇ ಮಹದಾಯಿ ನ್ಯಾಯಮಂಡಳಿ‌ ರಚಿಸುವ‌ ಶಿಫಾರಸನ್ನು ಸುಪ್ರೀಂಕೋರ್ಟ್ ಗೆ ಮಾಡಿದರು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.