ADVERTISEMENT

ಸ್ಪೈಟ್‌ ಜೆಟ್‌ನ ಪಾನಮತ್ತ ಪೈಲೆಟ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST

ಮಂಗಳೂರು: ಇಲ್ಲಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಸ್ಪೈಸ್‌ ಜೆಟ್‌ನ ಮುಖ್ಯ ಮಹಿಳಾ ಪೈಲೆಟ್‌ ಮದ್ಯಪಾನ ಮಾಡಿರುವುದು ಸಾಬೀತಾಗಿದ್ದು, ಅವರನ್ನು ಅಮಾನತು ಮಾಡಿ, ಸ್ವದೇಶಕ್ಕೆ ಕಳುಹಿಸಲಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಸ್ಪೈಸ್‌ ಜೆಟ್‌ನ ವ್ಯವಸ್ಥಾಪಕ (ಕಾರ್ಪೊರೇಟ್ ಕಮ್ಯುನಿಕೇಶನ್‌), ವಕ್ತಾರ ಆನಂದ್‌ ದೇವ್ರಾ, ಕೊರೆಂಡನ್‌ ಏರ್‌ಲೈನ್ಸ್‌ನ ಮುಖ್ಯ ಪೈಲೆಟ್‌ ಸೆಬಾಹತ್‌ ಉಲ್ಕು ಎರ್ಕ್‌ ಅವರು, ಸ್ಪೈಸ್‌ ಜೆಟ್‌ನ ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದು, ಪಾನಮತ್ತರಾಗಿರುವುದು ಸಾಬೀತಾಗಿದೆ. ಅದಕ್ಕಾಗಿ ಅವರಿಗೆ ವಿಮಾನ ಚಾಲನೆಗೆ ಅವಕಾಶ ನೀಡಿಲ್ಲ. ಅವರನ್ನು ಅಮಾನತು ಮಾಡಲಾಗಿದ್ದು, ಟರ್ಕಿಗೆ ವಾಪಸ್‌ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರು ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗಿನವರೆಗೆ ನಿಲ್ದಾಣದಲ್ಲೇ ಕುಳಿತುಕೊಳ್ಳಬೇಕಾಯಿತು. ಐದು ಗಂಟೆಗಳ ಅನಂತರ ಬದಲಿ ಪೈಲಟ್‌ನ ವ್ಯವಸ್ಥೆಯೊಂದಿಗೆ ವಿಮಾನ ಟೇಕ್‌ಆಫ್ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸ್ಪೈಸ್‌ ಜೆಟ್‌ ಏರ್‌ಲೈನ್ಸ್‌ ಕಂಪನಿಯು ಮಂಗಳೂರು-ದುಬೈ ಮಧ್ಯೆ ಒಂದು ವರ್ಷದಿಂದ ವಿಮಾನಯಾನ ಆರಂಭಿಸಿದೆ. ಸ್ಪೈಸ್‌ ಜೆಟ್‌ ಕಂಪನಿಯೊಂದಿಗೆ ಟರ್ಕಿಯ ಕೊರೆಂಡನ್‌ ಕಂಪನಿ ಒಪ್ಪಂದ ಮಾಡಿಕೊಂಡು, ತನ್ನ ವಿಮಾನಗಳ ಹಾರಾಟ ನಡೆಸುತ್ತಿದೆ. ಮಂಗಳವಾರ ರಾತ್ರಿ ಹೊರಡಬೇಕಿದ್ದ ವಿಮಾನವು ಇದೇ ಕೊರೆಂಡನ್‌ ಕಂಪನಿಗೆ ಸೇರಿದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.