ADVERTISEMENT

ರೈತನ ಮಗಳಿಗೆ ಮೂರು ಚಿನ್ನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಪರಸ್ಪರ ಖುಷಿ ಹಂಚಿಕೊಂಡ ಶೋಭಾ ಮತ್ತು ಚನ್ನಪ್ಪ
ಪರಸ್ಪರ ಖುಷಿ ಹಂಚಿಕೊಂಡ ಶೋಭಾ ಮತ್ತು ಚನ್ನಪ್ಪ   

ತುಮಕೂರು: ‘ನನ್ನ ಮಗಳು ಸಾಧನೆ ಮಾಡುತ್ತಾಳೆ ಎನ್ನುವ ಭರವಸೆ ಇತ್ತು. ಆದರೆ ಈ ಮಟ್ಟದಲ್ಲಿ ಜನರು ಗುರುತಿಸುವಂತೆ ಸಾಧಿಸುವಳು ಎಂದುಕೊಂಡಿರಲಿಲ್ಲ’ ಎಂದು ಪಕ್ಕದಲ್ಲಿದ್ದ ಮಗಳನ್ನು ತಬ್ಬಿ ಮುತ್ತಿಟ್ಟರು ಚನ್ನಪ್ಪ.

ಶನಿವಾರ ಇಲ್ಲಿಯ ತುಮಕೂರು ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ ಗಣಿತ ವಿಭಾಗದಲ್ಲಿ ಅಧ್ಯಯನ ಮಾಡಿದ ಕೆ.ಸಿ.ಶೋಭಾ ಐದು ಚಿನ್ನದ ಪದಕ ಪಡೆದಿದ್ದಾರೆ. ಈ ವೇಳೆ ಶೋಭಾ ಅವರಷ್ಟೇ ಖುಷಿ ಅವರ ತಂದೆ ಚನ್ನಪ್ಪ  ಮುಖದಲ್ಲಿ ಎದ್ದು ಕಂಡಿತ್ತು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೆಂಕೆರೆ ಗ್ರಾಮದ ಚನ್ನಪ್ಪ ಕೃಷಿಕರಾಗಿದ್ದಾರೆ. ಅವರ ಮೂವರು ಹೆಣ್ಣು ಮಕ್ಕಳಲ್ಲಿ ಶೋಭಾ ಕೊನೆಯವರು.

ADVERTISEMENT

‘ಅಪ್ಪ, ಅಮ್ಮನಿಗೆ ನನ್ನ ಸಾಧನೆ ಅಪಾರ ಖುಷಿ ನೀಡಿದೆ. ಅದೇ ನನಗೆ ಮುಖ್ಯ. ಅವರೇ ನನ್ನ ಎಲ್ಲ ಸಾಧನೆಗಳಿಗೂ ಕಾರಣ. ಮುಂದೆ ಪಿಎಚ್‌.ಡಿ ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ಶೋಭಾ ಹೇಳಿದರು. ಎಂ.ಕಾಂನಲ್ಲಿ ಪಿ.ಆಶ್ರಿತಾ, ಪದವಿಯಲ್ಲಿ ಎಂ.ಎನ್.ಲಾವಣ್ಯ, ಕೆ.ಎಸ್.ಕಾವ್ಯ, ಆರ್.ಅಶ್ವಿನಿ ತಲಾ ಮೂರು ಚಿನ್ನದ ಪದಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.

ಘಟಿಕೋತ್ಸವದಲ್ಲಿ ಹೆಚ್ಚು ಚ‍ಪ್ಪಾಳೆ ಪಡೆದಿದ್ದು ಅಂಗವಿಕಲೆ ಟಿ.ಎಸ್.ಮಂಜುಳಾ. ನಗರದ ಹೇಮಾದ್ರಿ ಕಾಲೇಜಿನಲ್ಲಿ ಸಮಾಜ ಕಾರ್ಯ ಪದವಿ (ಬಿಎಸ್‌ಡಬ್ಲ್ಯೂ) ಅಧ್ಯಯನ ಮಾಡಿದ ಅವರು ಚಿನ್ನದ ಪದಕ ಪಡೆದರು. ಮಂಜುಳಾ ಅವರ ತಾಯಿ ಸರೋಜಮ್ಮ ಹೂ ಮಾರಾಟ ಮಾಡಿ ಕುಟುಂಬ ನಡೆಸುತ್ತಿದ್ದಾರೆ.

‘ಈಗ ಎಂಎಸ್‌ಡಬ್ಲ್ಯೂ ಅಧ್ಯಯನ ಮಾಡುತ್ತಿದ್ದೇನೆ. ಜತೆಗೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಂಗವಿಕಲರಿಗೆ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಕಾರ್ಯಕರ್ತೆಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಪರಿವರ್ತನಾ ಚಾರಿಟಬಲ್ ಟ್ರಸ್ಟ್ ಮೂಲಕ ಅಂಗವಿಕಲರ ಪರ ಹೋರಾಟ ನಡೆಸುತ್ತಿದ್ದೇನೆ’ ಎಂದು ಮಂಜುಳಾ ತಿಳಿಸಿದರು.

‘ಸರ್ಕಾರಿ ಉದ್ಯೋಗ ಪಡೆಯುವುದೇ ನನ್ನ ಗುರಿ ಅಲ್ಲ. ನಾನೇ ಒಂದು ಸಂಸ್ಥೆ ಕಟ್ಟಿ ನನ್ನಂತಹ ಅನೇಕ ದುರ್ಬಲರಿಗೆ ಉದ್ಯೋಗ ನೀಡಬೇಕು ಎನ್ನುವ ಆಸೆ ಇದೆ’ ಎಂದರು.

ರಾಜ್ಯಪಾಲ ವಜುಭಾಯ್ ವಾಲಾ 14 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಿದರು. ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಘಟಿಕೋತ್ಸವ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿದರು.

ಅಂಗವಿಕಲೆ ಮಂಜುಳಾ ಸಾಧನೆ

ಘಟಿಕೋತ್ಸವದಲ್ಲಿ ಹೆಚ್ಚು ಚ‍ಪ್ಪಾಳೆ ಪಡೆದಿದ್ದು ಅಂಗವಿಕಲೆ ಟಿ.ಎಸ್.ಮಂಜುಳಾ. ನಗರದ ಹೇಮಾದ್ರಿ ಕಾಲೇಜಿನಲ್ಲಿ ಸಮಾಜ ಕಾರ್ಯ ಪದವಿ (ಬಿಎಸ್‌ಡಬ್ಲ್ಯೂ) ಅಧ್ಯಯನ ಮಾಡಿದ ಅವರು ಚಿನ್ನದ ಪದಕ ಪಡೆದರು. ಮಂಜುಳಾ ಅವರ ತಾಯಿ ಸರೋಜಮ್ಮ ಹೂ ಮಾರಾಟ ಮಾಡಿ ಕುಟುಂಬ ನಡೆಸುತ್ತಿದ್ದಾರೆ.

‘ಈಗ ಎಂಎಸ್‌ಡಬ್ಲ್ಯೂ ಅಧ್ಯಯನ ಮಾಡುತ್ತಿದ್ದೇನೆ. ಜತೆಗೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ಅಂಗವಿಕಲರಿಗೆ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಕಾರ್ಯಕರ್ತೆಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಪರಿವರ್ತನಾ ಚಾರಿಟಬಲ್ ಟ್ರಸ್ಟ್ ಮೂಲಕ ಅಂಗವಿಕಲರ ಪರ ಹೋರಾಟ ನಡೆಸುತ್ತಿದ್ದೇನೆ’ ಎಂದು ಮಂಜುಳಾ ತಿಳಿಸಿದರು.

‘ಸರ್ಕಾರಿ ಉದ್ಯೋಗ ಪಡೆಯುವುದೇ ನನ್ನ ಗುರಿ ಅಲ್ಲ. ನಾನೇ ಒಂದು ಸಂಸ್ಥೆ ಕಟ್ಟಿ ನನ್ನಂತಹ ಅನೇಕ ದುರ್ಬಲರಿಗೆ ಉದ್ಯೋಗ ನೀಡಬೇಕು ಎನ್ನುವ ಆಸೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.