ADVERTISEMENT

‘ಆಕಾಶ ಗಿಡಕ್ಕೆ ಗಿಳಿ ಕಿತ್ತಿತ್ತಲೇ ಪರಾಕ್’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ‘ಆಕಾಶ ಗಿಡಕ್ಕೆ ಗಿಳಿ ಕಿತ್ತಿತ್ತಲೇ ಪರಾಕ್‌’ ಎಂಬುದು ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ಅಧಿಕೃತ ಕಾರಣಿಕವಾಗಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಗುರುವಾರ ಘೋಷಣೆ ಮಾಡಿದೆ

ಬೆಂಗಳೂರಿನ ಅಶ್ವಿನಿ ಆಡಿಯೊದಲ್ಲಿ ಗೊರವಯ್ಯನ ನುಡಿಯ ಧ್ವನಿಪರೀಕ್ಷೆ ಮಾಡಲಾಯಿತು ಎಂದು ತಹಶೀಲ್ದಾರ್ ಕೆ.ರಾಘವೇಂದ್ರ ರಾವ್‌, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.ಹಾಲಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ
ದರು. ಇದನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಪರಿಶೀಲಿಸಿದೆ.

ಕಾರಣಿಕ ವೇಳೆ ಧರ್ಮಕರ್ತರು ಅಶ್ವರೂಢರಾಗಿ ಬರುವಾಗ ಏಕಕಾಲಕ್ಕೆ ನೂರಾರು ಜನ ನುಗ್ಗಿ ಬಂದಿದ್ದರಿಂದ ನೂಕುನುಗ್ಗಲು, ಗಲಾಟೆಯಾಗಿ ಗೊರವ
ಯ್ಯನ ವಾಣಿ ಅಸ್ಪಷ್ಟವಾಗಿ ಕೇಳಿಸಿತ್ತು.

ADVERTISEMENT

‘ಆಕಾಶ ಗಿಡಕ್ಕೆ ಗಿಳಿ ಕಿತ್ತಿತ್ತಲೇ ಪರಾಕ್‌’ ಕಾರಣಿಕ ನುಡಿಯನ್ನು ಭಕ್ತರು ತಮಗೆ ತೋಚಿದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ‘ದೈವವಾಣಿಯಲ್ಲಿ ಹಸಿರಿನ ಉಲ್ಲೇಖವಿರುವುದರಿಂದ ಶುಭ ಸೂಚಕವಾಗಿದೆ. ಈ ವರ್ಷ ಮಳೆ, ಬೆಳೆ ಸಮೃದ್ಧವಾಗಿ ಹಸಿರು ಉಕ್ಕುವ ಮುನ್ಸೂ
ಚನೆ ಇದೆ. ಆಕಾಶದಂತಿರುವ ದೊಡ್ಡ ರಾಜಕೀಯ ಪಕ್ಷದಲ್ಲಿ ಪಲ್ಲಟಗಳೂ ನಡೆಯಬಹುದು’ ಎಂದು ಕಾರಣಿಕ ಉಕ್ತಿಯನ್ನು ಮೈಲಾರದ ಹಿರಿಯರಾದ ಮಾಟ್ನಾರ ಬಸಪ್ಪ ಅರ್ಥೈಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.