ADVERTISEMENT

ತೋಟಗಾರಿಕೆ ಇಲಾಖೆ ಸುತ್ತೋಲೆ ಪ್ರತಿ ಗುರುವಾರ ಕ್ಷೇತ್ರ ಭೇಟಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಪ್ರತಿ ಗುರುವಾರ ಕ್ಷೇತ್ರ ಭೇಟಿ ಕಡ್ಡಾಯಗೊಳಿಸಿ, ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ತೋಟಗಾರಿಕೆ ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಬೇಕು.

ಗುರುವಾರ ಸರ್ಕಾರಿ ರಜೆ ಇದ್ದರೆ ಮರುದಿನ ಭೇಟಿ ನೀಡಬೇಕು. ಸೂಕ್ತ ಕಾರಣ ಇಲ್ಲದೆ ತಪ್ಪಿಸಿಕೊಂಡರೆ ಶಿಸ್ತು ಕ್ರಮ ಜರುಗಿಸಲಾಗುವುದು' ಎಂದು ಸುತ್ತೋಲೆಯಲ್ಲಿ ಆಯುಕ್ತ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

ADVERTISEMENT

ಇಲಾಖೆಯ ಯೋಜನೆಯಡಿ ನಿರ್ಮಾಣಗೊಂಡಿರುವ ಪಾಲಿ ಹೌಸ್, ನೆರಳು ಪರದೆ, ಈರುಳ್ಳಿ ಶೇಖರಣಾ ಘಟಕ, ಪ್ಯಾಕ್‌ ಹೌಸ್, ಕೃಷಿ ಹೊಂಡ, ಪ್ರದೇಶ ವಿಸ್ತರಣೆ, ಹನಿ ನೀರಾವರಿ ಘಟಕಗಳಿಗೆ ಭೇಟಿ ನೀಡಿ ಜಿಪಿಎಸ್ ಆಧಾರಿತ ಚಿತ್ರಗಳನ್ನು ಟೆಲಿಗ್ರಾಂನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಪ್ರಗತಿ ಕುಂಠಿತವಾಗಿದ್ದರೆ ಅಂತಹ ಸ್ಥಳಗಳ ಪರಿಶೀಲನೆಗೆ ಆದ್ಯತೆ ನೀಡಬೇಕು. ರೈತರೊಂದಿಗೆ ಸಂವಾದ ನಡೆಸಿ ತಾಂತ್ರಿಕ ಪರಿಹಾರ ಒದಗಿಸಬೇಕು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.