ADVERTISEMENT

51 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 19:11 IST
Last Updated 1 ಡಿಸೆಂಬರ್ 2018, 19:11 IST
ಮರಿಯಪ್ಪ
ಮರಿಯಪ್ಪ   

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2018ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದ್ದು, ಜೀವಮಾನ ಸಾಧನೆಗಾಗಿ ನೀಡುವ ವಿಶೇಷ ಪ್ರಶಸ್ತಿಗೆ ಧರ್ಮಾವರಪು ಬಾಲಾಜಿ, ವಾರ್ಷಿಕ ಪ್ರಶಸ್ತಿಗೆ ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ವ್ಯಂಗ್ಯಚಿತ್ರಕಾರರು ಸೇರಿ 51 ಜನರನ್ನು ಆಯ್ಕೆ ಮಾಡಲಾಗಿದೆ.

‘ಪ್ರಜಾವಾಣಿ’ಯ ನಿವೃತ್ತ ಸಹಾಯಕ ಸಂಪಾದಕ ಪ್ರೇಮಕುಮಾರ್ ಹರಿಯಬ್ಬೆ, ನಿವೃತ್ತ ಮುಖ್ಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ, ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ, ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ಜೆ.ಮರಿಯಪ್ಪ, ದಾವಣಗೆರೆಯ ಮುಖ್ಯ ವರದಿಗಾರ ಪ್ರಕಾಶ್ ಕುಗ್ವೆ, ಹಿರಿಯ ಉಪಸಂಪಾದಕಿ ಮಂಜುಶ್ರೀ ಕಡಕೋಳ, ಡೆಕ್ಕನ್ ಹೆರಾಲ್ಡ್‌ನ ಮುಖ್ಯ ಉಪಸಂಪಾದಕ ರಾಜು ವಿಜಾಪುರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವಿಶೇಷ ಪ್ರಶಸ್ತಿಯು ₹50 ಸಾವಿರ, ವಾರ್ಷಿಕ ಪ್ರಶಸ್ತಿಯು ₹25 ಸಾವಿರ ಹಾಗೂ ಫಲಕ ಒಳಗೊಂಡಿದೆ.

ADVERTISEMENT

ತಳ ಸಮುದಾಯದ ಅಂಕಣಕಾರರಿಗೆ ನೀಡಲಾಗುವ ಬಿ.ಆರ್. ಅಂಬೇಡ್ಕರ್ ‘ಮೂಕನಾಯಕ ಪ್ರಶಸ್ತಿ’ಗೆ ಸಿ.ಎಸ್. ದ್ವಾರಕನಾಥ್‌ ಅವರನ್ನು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ‘ಆಂದೋಲನ ಪ್ರಶಸ್ತಿ’ಯು ಕೋಲಾರವಾಣಿಗೆ ಸಿಕ್ಕಿದೆ.

ಸಿನಿಮಾ ಪತ್ರಕರ್ತರಿಗೆ ನೀಡುವ ‘ಅರಗಿಣಿ ಪ್ರಶಸ್ತಿ’ಗೆ ದೇಶಾದ್ರಿ ಹೊಸ್ಮನೆ, ಸಾಮಾಜಿಕ ಸಮಸ್ಯೆ ಬಿಂಬಿಸುವ ‘ಅಭಿಮಾನಿ ಪ್ರಶಸ್ತಿ’ಗೆ ಪರಮೇಶ್ವರ ಭಟ್‌ ಹಾಗೂ ಮಾನವೀಯ ಸಮಸ್ಯೆ ಕುರಿತು ಲೇಖನಕ್ಕೆ ನೀಡುವ ‘ಮೈಸೂರು ದಿಗಂತ ಪ್ರಶಸ್ತಿ’ಗೆ ಜಿ.ಎನ್‌. ನಾಗರಾಜು ಅವರನ್ನು ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಗಳು ತಲಾ ₹10 ಸಾವಿರ ಪುರಸ್ಕಾರವನ್ನು ಒಳಗೊಂಡಿದೆ.

ಪುರಸ್ಕೃತರ ಪಟ್ಟಿ: ಮೋಹನ ಹೆಗಡೆ, ಭಾನುತೇಜ್‌, ಬಿ.ಎಸ್. ಸತೀಶ್ ಕುಮಾರ್, ಜಿ.ಎಂ. ಕುಮಾರ್, ಕೆ.
ಎನ್‌. ಚನ್ನೇಗೌಡ, ಸಾಲೋಮನ್‌, ಆಯೇಶಾ ಖಾನಂ, ಅಬ್ದುಲ್‌ ಖಾಲಿಕ್‌, ಎಂ. ಅನಿಲ್ ಕುಮಾರ್, ಕೆ.ಎನ್.ನಾಗೇಶ್ ಕುಮಾರ್, ಹರಿಪ್ರಸಾದ್, ಈಶ್ವರ ಶಿವಣ್ಣ, ಬಸವರಾಜ ಭೂಸಾರೆ, ಮೋಹನಕುಮಾರ್, ದೊಡ್ಡಬೊಮ್ಮಯ್ಯ, ರಾಮು ಪಾಟೀಲ, ರಾಜು ನದಾಫ, ಉಮೇಶ ಪೂಜಾರ್, ಎಸ್.ವಿ. ಶಿವಪ್ಪಯ್ಯನ ಮಠ, ಶಶಿಕುಮಾರ್ ಪಾಟೀಲ, ಶಿವರಾಂ ಅಸುಂಡಿ, ಕೆ.ಜೆ. ಸುರೇಶ್, ಪಿ. ಪರಮೇಶ್, ಎಂ. ಪಾಷಾ, ಶರಣಪ್ಪ ಬಾಚಲಾಪುರ, ಸುಭಾಷ್ ಹುದಲೂರು, ಲೋಚನೇಶ್ ಹೂಗಾರ್, ಎಚ್.ಬಿ. ವೈದ್ಯನಾಥ್, ಕಂ.ಕ ಮೂರ್ತಿ, ಜೆ.ಆರ್. ಕೆಂಚೇಗೌಡ, ಮೀರಾ ಅಪ್ಪಯ್ಯ, ಕೆ.ಎನ್‌. ರವಿಕುಮಾರ್, ಎಚ್.ಬಿ. ಮಂಜುನಾಥ್, ನಂದೀಶ್, ಪಾ.ಶ್ರೀ. ಅನಂತರಾಂ, ವಿನ್ಸ್ಟೆನ್ ಕೆನಡಿ, ಕಾಗತಿ ನಾಗರಾಜಪ್ಪ, ಗಂಗಹನುಮಯ್ಯ, ವೆಂಕಟಸ್ವಾಮಿ, ಶ್ರೀಜಾ, ಸುಕೇಶ್ ಕುಮಾರ್ ಶೆಟ್ಟಿ, ಕೆ.ಎಸ್‌. ಜನಾರ್ದನಾಚಾರಿ, ಎನ್.ಎಸ್‌. ಸುಭಾಷ್ ಚಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.