ADVERTISEMENT

ಸಿದ್ದರಾಮಯ್ಯ ಪ್ರಕಾರ ಹಿಂದೂಗಳನ್ನು ಹೀಗಳೆಯುವುದು ಸೆಕ್ಯುಲರಿಸಂ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:13 IST
Last Updated 29 ನವೆಂಬರ್ 2022, 16:13 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಕಾರ ಮುಸ್ಲಿಮರ ತುಷ್ಟೀಕರಣವೇ ಸೆಕ್ಯುಲರಿಸಂ, ಹಿಂದೂಗಳನ್ನು ಹೀಗಳೆಯುವುದು ಮತ್ತು ಅವರ ಭಾವನೆಗೆ ಧಕ್ಕೆ ತರುವುದೇ ಸೆಕ್ಯುಲರಿಸಂ ಆಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ತಮ್ಮನ್ನು ಕೋಮುವಾದಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ತಿರುಗೇಟು ನೀಡಿರುವ ರವಿ, ‘ತಾವೊಬ್ಬ ಭಾರಿ ಸೆಕ್ಯುಲರ್‌ವಾದಿ ಎಂದು ಅವರು ಪೋಸ್‌ ಕೊಡುತ್ತಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಸಿದ್ದರಾಮಯ್ಯ ಅವರ ಸೆಕ್ಯುಲರಿಸಂ ಮಾದರಿ ಎಂದರೆ, ಟಿಪ್ಪು ಜಯಂತಿ ಹೆಸರಲ್ಲಿ ಅಮಾಯಕರ ಕಗ್ಗೊಲೆ, ಕುಂಕುಮ ಕಂಡರೆ ಭಯ ಎನ್ನುವುದು, ಸಾಬರ ಟೋಪಿ ಹಾಕಿ ಆನಂದಿಸುವುದು, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ದಂಗೆಕೋರರ ಪರ ನಿಲ್ಲುವುದು, ಶಾಸಕರ ಮನೆಗೆ ಬೆಂಕಿ ಇಟ್ಟವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್‌ ನೀಡುವುದು’ ಎಂದು ಕಿಡಿಕಾರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.