ADVERTISEMENT

ತವರಿನ ಜನರ ಕಷ್ಟಕ್ಕೆ ಮಿಡಿದ ಅಮೆರಿಕನ್ ಶಾಲೆಯ ಬೆಂಗಳೂರು ವಿದ್ಯಾರ್ಥಿನಿ ವಿಭಾ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 2:55 IST
Last Updated 21 ಆಗಸ್ಟ್ 2021, 2:55 IST
ಹನುಮಂತರಾವ್‌ ಹಾಗೂ ಗಾಯತ್ರಿ ಅವರು ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ಚೆಕ್‌ ಹಸ್ತಾಂತರಿಸಿದರು
ಹನುಮಂತರಾವ್‌ ಹಾಗೂ ಗಾಯತ್ರಿ ಅವರು ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ಚೆಕ್‌ ಹಸ್ತಾಂತರಿಸಿದರು   

ಬೆಂಗಳೂರು: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಏಷ್ಯನ್‌-ಅಮೆರಿಕನ್‌ ಪ್ರೌಢಶಾಲೆಯಲ್ಲಿ ಓದುತ್ತಿರುವ ಬೆಂಗಳೂರಿನ ವಿಭಾ ಅನಿಲ್‌ ಅವರು ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ತವರೂರಿನ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಗೆಳತಿಯರಾದ ಕಲ್ಯಾ ಟುರಾಲಕಿ ಮತ್ತು ಕ್ಯಾಂಡೈಸ್‌ ಬಾಕ್‌ ಅವರ ಜೊತೆ ಸೇರಿ ವಿಭಾ ಒಟ್ಟು ₹1.80 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ.

ಇದನ್ನು ಗಿರಿನಗರದಲ್ಲಿ ವಾಸವಿರುವ ತಮ್ಮ ಅಜ್ಜ ಹನುಮಂತರಾವ್‌ ಹಾಗೂ ಅಜ್ಜಿ ಗಾಯತ್ರಿ ರಾವ್‌ ಅವರಿಗೆ ಕಳುಹಿಸಿರುವ ಅವರು ಆ ಮೊತ್ತವನ್ನು ಬಸವನಗುಡಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಅವರು ಅಧ್ಯಕ್ಷರಾಗಿರುವ ಸಂಕಲ್ಪ ಸೇವಾ ಟ್ರಸ್ಟ್‌ಗೆ ನೀಡುವಂತೆ ಸೂಚಿಸಿದ್ದಾರೆ. ಈ ಮೊತ್ತದಲ್ಲಿ ಪಲ್ಸ್‌ ಆಕ್ಸಿಮೀಟರ್‌ ಸೇರಿದಂತೆ ಕೋವಿಡ್‌ ಪೀಡಿತರಿಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ವಿತರಿಸುವಂತೆ ತಿಳಿಸಿದ್ದಾರೆ.

ADVERTISEMENT

ವಿಭಾ ಅವರ ಕಾರ್ಯಕ್ಕೆ ರವಿಸುಬ್ರಹ್ಮಣ್ಯ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.