ADVERTISEMENT

ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ: ಕಾನೂನು ವಿವರಿಸಲು ಇ.ಡಿಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 16:17 IST
Last Updated 3 ಡಿಸೆಂಬರ್ 2020, 16:17 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಅಮ್ನೆಸ್ಟಿ ಇಂಟರ್‌ ನ್ಯಾಷನಲ್ ಟ್ರಸ್ಟ್‌ ಭಾರತೀಯರಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲು ಇರುವ ಅಧಿಕಾರ ವಿವರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಾಗಲೂ ಕಾನೂನಿನ ನಿಬಂಧನೆಗಳನ್ನು ಇ.ಡಿ ಬಹಿರಂಗಪಡಿಸಿಲ್ಲ. ಗ್ರಾಹಕರ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಬ್ಯಾಂಕ್‌ಗಳ ಗೋಪ್ಯವಾಗಿ ಇರಿಸಬೇಕು ಮತ್ತು ಬೇರೆ ಯಾರಿಗೂ ಮಾಹಿತಿ ಹಂಚಿಕೆ ಮಾಡಬಾರದು’ ಎಂದು ಅರ್ಜಿದಾರರು ತಿಳಿಸಿದ್ದಾರೆ.

2020ರ ಆಗಸ್ಟ್ 25ರಂದು ಬ್ಯಾಂಕ್‌ಗಳ ಜತೆ ಇ.ಡಿ ನಡೆಸಿರುವ ಸಂವಹನವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ADVERTISEMENT

‘ಸತತ ಎಂಟು ವರ್ಷಗಳಿಂದ ‌ಅರ್ಜಿದಾರರ ಚಟುವಟಿಕೆಗಳ ಮೇಲೆ ಸರ್ಕಾರ ನಿಗಾ ವಹಿಸುತ್ತಿದೆ. ಈ ವಿಷಯದಲ್ಲಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಲು ನ್ಯಾಯಮಂಡಳಿಗಳು ಲಭ್ಯ ಇವೆ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.