ADVERTISEMENT

‘ಇನ್ನೆಷ್ಟು ತಲೆಮಾರು ನ್ಯಾಯ ಬೇಡುತ್ತಲೇ ಇರಬೇಕು?’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:36 IST
Last Updated 7 ನವೆಂಬರ್ 2018, 20:36 IST
ಅನಂತಕುಮಾರ್ ಹೆಗಡೆ ಹಾಗೂ ಟ್ವಿಟರ್‌ನಲ್ಲಿ ಬರೆದಿರುವ ಬರಹ
ಅನಂತಕುಮಾರ್ ಹೆಗಡೆ ಹಾಗೂ ಟ್ವಿಟರ್‌ನಲ್ಲಿ ಬರೆದಿರುವ ಬರಹ   

ಶಿರಸಿ: ‘ಇನ್ನೆಷ್ಟು ತಲೆಮಾರು ನ್ಯಾಯ ಬೇಡುತ್ತಲೇ ಇರಬೇಕು? ರಾಮ ಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ವರ್ತಿಸುತ್ತಿರುವ ರೀತಿ ಹಿಂದೂಗಳಿಗೆ ನೋವುಂಟು ಮಾಡಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಮ್ಮ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

‘ಐದು ಶತಮಾನಗಳಿಂದ ರಾಮ ಮಂದಿರಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ಎಷ್ಟೋ ಭಕ್ತರಿಗೆ ಅನ್ಯಾಯವಾಗಿದೆ. ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸದಿದ್ದರೆ, ಸಮಾಜದಲ್ಲಿ ಉಂಟಾಗುವ ಕ್ಷೋಭೆ ತಣಿಸಲು ಸರ್ಕಾರಕ್ಕೆ ಅನ್ಯಮಾರ್ಗ ಶೋಧಿಸುವ ಅನಿವಾರ್ಯತೆ ಎದುರಾಗುತ್ತದೆ. ನಾವೀಗ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇವೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

**

ADVERTISEMENT

ನ್ಯಾಯಾಲಯವೇ ರಾಮ ಮಂದಿರ ವಿಚಾರವನ್ನು ಆದ್ಯತೆಯಲ್ಲಿ ಪರಿಗಣಿಸದಿರುವುದು ಹಿಂದೂಗಳ ಹೋರಾಟಕ್ಕೆ ಅವಮಾನ ಮಾಡಿದಂತೆ.

–ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.