ADVERTISEMENT

ರ‍್ಯಾಗಿಂಗ್‌ಗೆ ಕಡಿವಾಣ ಹಾಕದ ಸಂಸ್ಥೆಗಳ ವಿರುದ್ಧ ಕ್ರಮ: ಯುಜಿಸಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 17:02 IST
Last Updated 1 ಜನವರಿ 2019, 17:02 IST

ಬೆಂಗಳೂರು: ರ‍್ಯಾಗಿಂಗ್‌ಗೆ ಕಡಿವಾಣ ಹಾಕದ ಉನ್ನತ ಶಿಕ್ಷಣ ಸಂಸ್ಥೆಗಳ ವಿರುದ್ಧ ದಂಡನೀಯ ಕ್ರಮ ತೆಗೆದುಕೊಳ್ಳುವುದಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಕಾರ್ಯದರ್ಶಿ ಪ್ರೊ. ರಜನೀಶ್‌ ಜೈನ್‌ ಎಚ್ಚರಿಕೆ ನೀಡಿದ್ದಾರೆ.

ರ‍್ಯಾಗಿಂಗ್‌ ತಡೆಗೆಯುಜಿಸಿಯು ಹಲವು ಕ್ರಮಗಳನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅವುಗಳನ್ನು ಎಲ್ಲ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿಯೂ ಅಳವಡಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

‘ರ‍್ಯಾಗಿಂಗ್‌ ಕ್ರಿಮಿನಲ್‌ ಅಪರಾಧ. ಶಿಕ್ಷಣ ಸಂಸ್ಥೆಗಳು ನಿಯಂತ್ರಣ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು. ರ‍್ಯಾಗಿಂಗ್‌ ತಡೆ ಸಮಿತಿ ಮತ್ತು ಸ್ಕ್ವಾಡ್‌ಗಳನ್ನು ರಚಿಸಬೇಕು. ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ನೋಡಲ್‌ ಅಧಿಕಾರಿಗಳನ್ನು ನೇಮಿಸುವುದರ ಜತೆಗೆ ಅವರ ಪೂರ್ಣ ಮಾಹಿತಿ
ಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದಿದ್ದಾರೆ.

ADVERTISEMENT

ರ‍್ಯಾಗಿಂಗ್‌ ಬಗ್ಗೆ ದೂರುಗಳನ್ನು ರಾಷ್ಟ್ರ ಮಟ್ಟದ ಸಹಾಯವಾಣಿ 1800–180–5522 ಅಥವಾ ಇಮೇಲ್‌ helpline@antiragging.in ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.