ADVERTISEMENT

15ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:18 IST
Last Updated 24 ನವೆಂಬರ್ 2020, 21:18 IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯೊ, ಪುನಾರಚನೆಯೊ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ, 15ಕ್ಕೂ ಹೆಚ್ಚು ನಿಗಮ, ಮಂಡಳಿಗಳು, ಪ್ರಾಧಿಕಾರಗಳು, ಸಮಿತಿಗಳಿಗೆ ಅಧ್ಯಕ್ಷರು, ಅಧಿಕಾರೇತರ ನಿರ್ದೇಶಕರನ್ನು ನೇಮಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬೀಗರಾಗಿರುವ ಎಸ್‌.ಐ. ಚಿಕ್ಕನಗೌಡ್ರು ಅವರನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮಕ್ಕೆ ಹಾಗೂ ಆಪ್ತರಾದ ಎಂ. ರುದ್ರೇಶ್ ಅವರನ್ನುಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯಭಿವೃದ್ಧಿ ನಿಯಮಿತ) ಅಧ್ಯಕ್ಷರಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಯಾಗಿರುವ ಯಲಹಂಕ ಶಾಸಕ ಎಸ್.ಆರ್‌. ವಿಶ್ವನಾಥ್‌ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಟ್ಟ ನೀಡಲಾಗಿದೆ.

ಕುಂದಗೋಳ ಕ್ಷೇತ್ರದ ಮಾಜಿ ಶಾಸಕರಾಗಿರುವ ಚಿಕ್ಕನಗೌಡ್ರು, ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ಹಿಂದೆ ರಾಮನಗರ ಜಿಲ್ಲಾ ಘಟಕ ಅಧ್ಯಕ್ಷರಾಗಿದ್ದ ರುದ್ರೇಶ್‌, ಹಿಂದೆ ರಾಮನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಿ.ವೈ. ವಿಜಯೇಂದ್ರ ಆಪ್ತರಾದ ತಮ್ಮೇಶಗೌಡ ಅವರನ್ನು ಕವಿಕಾ ಅಧ್ಯಕ್ಷರಾಗಿ ನೇಮಿಸಲಾಗಿದೆ.

ADVERTISEMENT

ನಿಗಮ/ ಸಮಿತಿ / ಮಂಡಳಿಗಳಿಗೆ ನೇಮಕಗೊಂಡವರು
1. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ; ಎಸ್‌.ಐ. ಚಿಕ್ಕನಗೌಡ್ರು
2.ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯಭಿವೃದ್ಧಿ ನಿಯಮಿತ); ಎಂ. ರುದ್ರೇಶ್
3.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ; ಎಸ್‌.ಆರ್‌. ವಿಶ್ವನಾಥ್
4.ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ; ಲಿಂಗರೆಡ್ಡಿ ಗೌಡ, ಕಲಬುರ್ಗಿ ಜಿಲ್ಲೆ, ಚಿತ್ತಾಪುರ ತಾಲ್ಲೂಕು
5.ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ; ವಿಜುಗೌಡ ಎಸ್‌. ಪಾಟೀಲ, ವಿಜಯಪುರ
6.ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ; ತಾರಾ ಅನೂರಾಧ, ಬೆಂಗಳೂರು
7.ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ; ಕಿರಣ್‌ಕುಮಾರ್‌ ಕೆ.ಎಸ್‌., ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ
8.ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ; ದುರ್ಯೋಧನ ಐಹೊಳೆ, ಬೆಳಗಾವಿ
9.ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ; ಎಚ್‌. ಹನುಮಂತಪ್ಪ, ಬಳ್ಳಾರಿ
10.ಕೇಂದ್ರ ಪರಿಹಾರ ಸಮಿತಿ; ಎಂ. ರಾಮಚಂದ್ರ, ಚಾಮರಾಜನಗರ
11.ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ; ಸಿ. ಮುನಿಕೃಷ್ಣ, ಬೆಂಗಳೂರು
12.ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ; ರಘು ಆರ್‌ (ಕೌಟಿಲ್ಯ), ಮೈಸೂರು
13.ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ; ಬಾಬು ಪತ್ತಾರ್‌, ಬೆಂಗಳೂರು
14.ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ; ಜಿ.ಕೆ. ಗಿರೀಶ್‌ ಉಪ್ಪಾರ್‌, ಚಿಕ್ಕಮಗಳೂರು
15.ಸವಿತಾ ಸಮಾಜ ಅಭಿವೃದ್ಧಿ ನಿಗಮ; ಎಸ್‌. ನರೇಶ್‌ಕುಮಾರ್‌, ಬೆಂಗಳೂರು
16.ಕರ್ನಾಟಕ ರಸ್ತೆ ಸಾರಿಗೆ ನಿಗಮ; ಪಿ. ರುದ್ರೇಶ, ಶಿವಮೊಗ್ಗ
17.ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ (ಕವಿಕಾ); ತಮ್ಮೇಶ ಗೌಡ ಎಚ್‌.ಸಿ. ಬೆಂಗಳೂರು
18.ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ; ನಿತಿನ್‌ಕುಮಾರ್‌, ಮಂಗಳೂರು
19.ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ; ಎಲ್‌.ಆರ್‌. ಮಹದೇವಸ್ವಾಮಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.