ADVERTISEMENT

ನಿವೃತ್ತರಿಗೂ ‘ಆರೋಗ್ಯ ಸಂಜೀವಿನಿ’: ಬೊಮ್ಮಾಯಿ ಆಶ್ವಾಸನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:31 IST
Last Updated 8 ಜುಲೈ 2022, 19:31 IST
ಕಾರ್ಯಕ್ರಮವದಲ್ಲಿ ಭಾಗವಹಿಸಿದ್ದ ನಿವೃತ್ತ ನೌಕರರು
ಕಾರ್ಯಕ್ರಮವದಲ್ಲಿ ಭಾಗವಹಿಸಿದ್ದ ನಿವೃತ್ತ ನೌಕರರು   

ಬೆಂಗಳೂರು: ‘ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವನಗದು ರಹಿತ ‘ಆರೋಗ್ಯ ಸಂಜೀವಿನಿ’ ಯೋಜನೆ ಯನ್ನು 4.30 ಲಕ್ಷ ನಿವೃತ್ತರು, 1 ಲಕ್ಷ ಪಿಂಚಣಿದಾರರಿಗೂಅನ್ವಯಿಸಲು ಕ್ರಮಕೈಗೊಳ್ಳಲಾಗುವುದು‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರು ಮತ್ತು ನಿವೃತ್ತರು ಸರ್ಕಾರದ‌ ಎರಡು ಕಣ್ಣು. 6 ಲಕ್ಷ ಸರ್ಕಾರಿ ನೌಕರರನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನಿವೃತ್ತರಿಗೂ ಈ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ADVERTISEMENT

‘ಬಹುತೇಕ ನೌಕರರು ಅಂತಃಕರಣ ಮರೆತಿದ್ದಾರೆ. ಸಹಿ ಹಾಕಿಹೋಗುವ ಚಟ ಬೆಳೆಸಿಕೊಂಡ ಕೆಲವರು ಮಾನಸಿಕವಾಗಿ ನಿವೃತ್ತರಾಗಿದ್ದಾರೆ. ಬಡವರು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಹೃದಯದಲ್ಲಿ ಕರುಣೆ ಇರಬೇಕು‘ ಎಂದು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಉಚಿತ ಆರೋಗ್ಯ ಯೋಜನೆ ಅಡಿ ನೌಕರರು 1,250 ಕಾಯಿಲೆಗಳಿಗೆ ನಗದು ರಹಿತವಾಗಿ ಸೇವೆ ಪಡೆಯಬಹುದಾಗಿದೆ. ನಿವೃತ್ತರಿಗೂ ಯೋಜನೆ ಅನ್ವಯಿಸಬೇಕು ಎಂದು ಕೋರಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷಎಲ್.ಭೈರಪ್ಪ ಪ್ರಸ್ತಾವಿಕ ಮಾತನಾಡಿದರು.ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ಸಚಿವರಾದ ವಿ.ಸೋಮಣ್ಣ, ಸಿ.ಎನ್‌.ಅಶ್ವತ್ಥ ನಾರಾಯಣ, ಸಂಘದ ಮಾಜಿ ಅಧ್ಯಕ್ಷಶೇಷೇಗೌಡ, ಶಾಸಕ ಎ.ದೇವೇಗೌಡ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.