ADVERTISEMENT

ಇಬ್ರಾಹಿಂ ಸುತಾರ ನೆನಪಿನಲ್ಲಿ ಆಶ್ರಮ: ಸಚಿವ ಕಾರಜೋಳ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 19:11 IST
Last Updated 14 ಫೆಬ್ರುವರಿ 2022, 19:11 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ‘ಕನ್ನಡದ ಕಬೀರ ಎಂದೇ ಖ್ಯಾತಿಯಾಗಿದ್ದ ದಿವಂಗತ ಇಬ್ರಾಹಿಂ ಸುತಾರ ಅವರ ಮನೆಯನ್ನು ಆಶ್ರಮವಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರ ಜತೆ ಮಾತುಕತೆ ನಡೆಸುತ್ತೇನೆ’ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇತ್ತೀಚೆಗೆ ನಿಧನರಾದವರಿಗೆವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾದ ಸಂತಾಪ ಸೂಚಿಸುವ ನಿರ್ಣಯದ ಮೇಲೆ ಮಾತನಾಡಿದ ಅವರು, ‘ಇಬ್ರಾಹಿಂ ಸುತಾರ ಅವರ ಜತೆ 30 ವರ್ಷಗಳಿಂದ ಒಡನಾಟವಿದೆ. ತಮ್ಮ ಮನೆಯನ್ನು ಆಶ್ರಮವಾಗಿ ಪರಿವರ್ತಿಸುವ ಮತ್ತು ಗ್ರಂಥಾಲಯ ಸ್ಥಾಪಿಸಬೇಕು ಎಂದು ಅವರು ಹಲವು ಬಾರಿ ನನ್ನ ಬಳಿ ಪ್ರಸ್ತಾಪಿಸಿದ್ದರು. ಅವರ ಮಗನೂ ಕೆಲ ದಿನಗಳ ಹಿಂದೆ ಈ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT