ADVERTISEMENT

ಸಾಗರ: ದಕ್ಷಿಣ ಭಾರತದ ಮೊದಲ ಖಗೋಳಶಾಸ್ತ್ರ ಅಧ್ಯಯನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 19:05 IST
Last Updated 26 ಏಪ್ರಿಲ್ 2019, 19:05 IST
ಸಾಗರದ ತ್ಯಾಗರ್ತಿ ರಸ್ತೆಯಲ್ಲಿರುವ ತಾಷ್ ರೆಸಾರ್ಟ್ ನಲ್ಲಿ ನವ ದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆ ಆರಂಭಿಸುತ್ತಿರುವ ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರ ‘ಆಸ್ಟ್ರೋ ಪೋರ್ಟ್’ನ ಕುರಿತು ವಿವರ ನೀಡಲು ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಸಚಿನ್ ಬಾಂಬ ರಾಕೆಟ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಸಾಗರ: ಇಲ್ಲಿನ ತ್ಯಾಗರ್ತಿ ರಸ್ತೆಯಲ್ಲಿರುವ ತಾಷ್ ರೆಸಾರ್ಟ್‌ನಲ್ಲಿ ನವದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆ ದಕ್ಷಿಣ ಭಾರತದ ಮೊದಲ ಖಗೋಳಶಾಸ್ತ್ರ ಅಧ್ಯಯನ ಕೇಂದ್ರ ‘ಆಸ್ಟ್ರೋ ಪೋರ್ಟ್’ ಆರಂಭಿಸುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಬಾಂಬ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದೇಶಗಳಲ್ಲಿ ಖಗೋಳಶಾಸ್ತ್ರ ಅಧ್ಯಯನ ಒಂದು ಕುತೂಹಲದ ವಿಷಯವಾಗಿದೆ. ಚಿಲಿಯಂತಹ ದೇಶದಲ್ಲಿ ಹಲವು ಕಡೆ ಖಗೋಳಶಾಸ್ತ್ರ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಭಾರತದಲ್ಲೂ ಈ ಕುರಿತು ಹೆಚ್ಚಿನ ಆಸಕ್ತಿ ಮೂಡಿಸುವ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ’ ಎಂದರು.

‘ಪ್ರತಿದಿನ ಆಗಸದಲ್ಲಿ ಹಲವು ರೀತಿಯ ಕುತೂಹಲಕಾರಿ ವಿದ್ಯಮಾನಗಳು ಘಟಿಸುತ್ತಿರುತ್ತವೆ. ಅವುಗಳನ್ನು ವೈಜ್ಞಾನಿಕ ದೃಷ್ಟಿಕೋನದ ಜೊತೆಗೆ ಸಾಮಾನ್ಯ ಜ್ಞಾನವನ್ನು ಪಡೆಯುವ ನಿಟ್ಟಿನಲ್ಲೂ ಗಮನಿಸುವ, ಪರಸ್ಪರ ಸಮಾಲೋಚನೆ ನಡೆಸುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

ಸೂರ್ಯಗ್ರಹಣ, ಚಂದ್ರಗ್ರಹಣದಂತಹ ಅಪೂರ್ವ ವಿದ್ಯಮಾನಗಳನ್ನು ಖಗೋಳ ಶಾಸ್ತ್ರದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಕುತೂಹಲವನ್ನು ಮಕ್ಕಳಲ್ಲಿ, ಯುವಜನರಲ್ಲಿ ಬೆಳೆಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.