ADVERTISEMENT

ಟೊಟೊ ಪ್ರಶಸ್ತಿಗೆ ಯುವ ಬರಹಗಾರರಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 18:44 IST
Last Updated 13 ಜುಲೈ 2019, 18:44 IST

ಬೆಂಗಳೂರು: ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಟೊಟೊ ಫಂಡ್ಸ್‌ ದಿ ಆರ್ಟ್ಸ್‌ (ಟಿ.ಎಫ್.ಎ) ಸಂಸ್ಥೆಯು ನೀಡುವ ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡದಸೃಜನಶೀಲಯುವಬರಹಗಾರರಿಗೆಮೀಸಲಾದ2020ನೇ ಸಾಲಿನಟೊಟೊ ಪ್ರಶಸ್ತಿಯು ₹ 50 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರಶಸ್ತಿಗೆ ಬರಹಗಳನ್ನು ಕಳುಹಿಸುವವರು ಕತೆ, ಕವಿತೆ ಮತ್ತು ನಾಟಕ ಪ್ರಕಾರಗಳ ಪೈಕಿ ಯಾವುದಾದರೂ ಒಂದರಲ್ಲಿ ಸಾಧನೆ ಮಾಡಿರಬೇಕು. ಅವರ ವಯಸ್ಸು 18 ವರ್ಷದಿಂದ 29ವರ್ಷದ ಒಳಗಿರಬೇಕು. ಅನಿವಾಸಿ ಭಾರತೀಯರು ಈ ಪ್ರಶಸ್ತಿಗೆ ಅರ್ಹರಲ್ಲ.

ADVERTISEMENT

ಪ್ರಶಸ್ತಿಗೆ ಬರಹಗಳನ್ನು ಕಳುಹಿಸಲು 2019ರ ಆಗಸ್ಟ್ 27 ಕೊನೆಯ ದಿನ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ವೆಲ್ಲಾನಿ ದಂಪತಿಯ ಮಗನಾದ ಆಂಗಿರಸ ಟೊಟೊ ‌ಕಿರಿಯ ವಯಸ್ಸಿನಲ್ಲಿಯೇ ನಿಧನರಾಗಿದ್ದರು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿ ಹೊಂದಿದ್ದ ಮಗನ ಸ್ಮರಣಾರ್ಥ ವೆಲ್ಲಾನಿ ದಂಪತಿ 2004ರಲ್ಲಿ ಪ್ರಶಸ್ತಿ ಆರಂಭಿಸಿದ್ದರು.

ವಿಳಾಸ: ಟೊಟೊ ಫಂಡ್ಸ್ ದಿ ಆರ್ಟ್ (ಟಿಎಫ್ಎ), ಎಚ್ 301, ಆದರ್ಶ್ ಗಾರ್ಡನ್ಸ್, 8ನೇ ಹಂತ, 47ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು 560 082

ಸಂಪರ್ಕ: 080– 26990549 ಅಥವಾ http://totofundsthearts.blogspot.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.