ADVERTISEMENT

ಬಳ್ಳಾರಿಯಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 19:34 IST
Last Updated 12 ಅಕ್ಟೋಬರ್ 2019, 19:34 IST
ರಾಜ್ಯಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರಾದ ದಾವಣಗೆರೆಯ ನಿಖಿತ ಎಸ್‌.ರಾಜ್‌, ಯಾದಗಿರಿಯ ಎಸ್‌.ಪವನ್‌, ಮಡಿಕೇರಿಯ ಬಿ.ಸಿ.ಅಭಿಜ್ಞಾನ ಮತ್ತು ಬೀದರ್‌ನ ಅಪ್ಪು ಗಣೇಶ್‌ ಗಣ್ಯರೊಂದಿಗೆ ಇದ್ದಾರೆ
ರಾಜ್ಯಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತರಾದ ದಾವಣಗೆರೆಯ ನಿಖಿತ ಎಸ್‌.ರಾಜ್‌, ಯಾದಗಿರಿಯ ಎಸ್‌.ಪವನ್‌, ಮಡಿಕೇರಿಯ ಬಿ.ಸಿ.ಅಭಿಜ್ಞಾನ ಮತ್ತು ಬೀದರ್‌ನ ಅಪ್ಪು ಗಣೇಶ್‌ ಗಣ್ಯರೊಂದಿಗೆ ಇದ್ದಾರೆ   

ಬಳ್ಳಾರಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಗರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಯುವ ವಿಜ್ಞಾನಿಗಳ ಸಮಾವೇಶ ಶನಿವಾರ ಮುಕ್ತಾಯವಾಗಿದ್ದು, ದಾವಣಗೆರೆಯ ನಿಖಿತ ಎಸ್‌.ರಾಜ್‌, ಯಾದಗಿರಿಯ ಎಸ್‌.ಪವನ್‌, ಮಡಿಕೇರಿಯ ಬಿ.ಸಿ.ಅಭಿಜ್ಞಾನ ಮತ್ತು ಬೀದರ್‌ನ ಅಪ್ಪು ಗಣೇಶ್‌ ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಗೆ ಪಾತ್ರರಾದರು.

ರಾಜ್ಯದ ವಿವಿಧ ಜಿಲ್ಲೆಗಳ 92 ವಿದ್ಯಾರ್ಥಿಗಳು ವಿಜ್ಞಾನದ ಅನ್ವೇಷಣೆಯ ಮಾದರಿಗಳನ್ನು ಪ್ರದರ್ಶಿಸಿದ್ದರು. ಅಂತಿಮ ಹಂತಕ್ಕೆ ಆಯ್ಕೆಯಾದ 12 ವಿದ್ಯಾರ್ಥಿಗಳ ಮಾದರಿಗಳನ್ನು ಎಂಟು ತಜ್ಞರು ಪರಿಶೀಲಿಸಿ, ಸಂದರ್ಶನ ನಡೆಸಿ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಪ್ರಶಸ್ತಿ ಪ್ರದಾನ ಮಾಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT