ADVERTISEMENT

ಜೇನು ತಿನ್ನಲು ಹೋಗಿ ಬಾವಿಗೆ ಬಿದ್ದ ಕರಡಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 12:37 IST
Last Updated 26 ಡಿಸೆಂಬರ್ 2018, 12:37 IST
   

ತುಮಕೂರು: ತೋವಿನಕೆರೆ ಸಮೀಪದ ಜುಂಜರಾಮನಹಳ್ಳಿ ಜನಾರ್ದನ ಅವರ ಪಾಳು ಬಾವಿಗೆ ಮಂಗಳವಾರ ರಾತ್ರಿ ಕರಡಿ ಬಿದ್ದಿದೆ.

ಬಾವಿಯ ಹತ್ತಿರ ಜೇನು ಗೂಡು ಕಟ್ಟಿದ್ದು,ಜೇನು ತಿನ್ನಲು ಹೋಗಿ ಬಾವಿಯ ಒಳಗಡೆ ಬಿದ್ದಿದೆ. ಬಾವಿ ಇಪ್ಪತ್ತು ಅಡಿ ಅಳವಿದೆ.

ಕರಡಿಯನ್ನು ಹಿಡಿದು ಮೇಲೆ ತರಲು ಬನ್ನೇರುಘಟ್ಟ ಅಥವಾ ಹಾಸನದಿಂದ ತಂಡ ಕರೆಸಲಾಗುತ್ತದೆ ಎಂದು ಎಸಿಎಫ್ ನಾಗರಾಜು ದೂರವಾಣಿ ಮೂಲಕ ತಿಳಿಸಿದರು.

ADVERTISEMENT

ಸ್ಥಳದಲ್ಲಿ ಅರ್.ಎಫ್.ಓ ಸುಭಾಷ್ ಚಂದ್ರ,ನಾಗರಾಜು ಹಾಗೂ ಸಿಬ್ಬಂದಿ ಇದ್ದಾರೆ. ಕರಡಿ ನೋಡಲು ನೂರಾರು ಜನರು ಬರುತ್ತಿದ್ದಾರೆ. ತೋವಿನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಎಂಟತ್ತು ಜನರ ಮೇಲೆ ಕರಡಿಗಳು ದಾಳಿ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.