ADVERTISEMENT

ಬಳ್ಳಾರಿ: ಇಬ್ಬರು ಕೊರೊನಾ ಸೋಂಕಿತರು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 9:45 IST
Last Updated 26 ಏಪ್ರಿಲ್ 2020, 9:45 IST
ಕೊರೊನಾ ಸೋಂಕಿತರು ಗುಣಮುಖರಾದ ಸಂದರ್ಭ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ಹೇಳಿದರು.
ಕೊರೊನಾ ಸೋಂಕಿತರು ಗುಣಮುಖರಾದ ಸಂದರ್ಭ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ಹೇಳಿದರು.   

ಬಳ್ಳಾರಿ: ಕೊರೊನಾ ಸೋಂಕು ತಗುಲಿದ್ದ ಇಬ್ಬರು ರೋಗಿಗಳುಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕಾರಣ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಇಬ್ಬರೂ ಧನ್ಯವಾದ ಅರ್ಪಿಸಿದರು. ಅದರಂತೆ ವೈದ್ಯರು ಹಾಗೂ ಸಿಬ್ಬಂದಿ ಇಬ್ಬರಿಗೂಶುಭವಾಗಲೆಂದು ತಿಳಿಸಿ ಆಸ್ಪತ್ರೆಯಿಂದ ಬೀಳ್ಕೊಟ್ಟರು. ಇವರನ್ನು ಹೊಸಪೇಟೆಯ ಪಿ-90 & ಬಳ್ಳಾರಿಯ ಗುಗ್ಗರಹಟ್ಟಿಯ ಪಿ-151 ಎಂದು ಗುರುತಿಸಲಾಗಿದೆ. ಇವರು ಕೊರೊನಾ ಸೋಂಕು ತಗುಲಿಬಳ್ಳಾರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರನ್ನೂ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದು ಮನೆ ತಲುಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT