ADVERTISEMENT

ಜನೋತ್ಸವವನ್ನು ‘ಜನಸ್ಪಂದನ’ ಹೆಸರಿನಲ್ಲಿ ನಡೆಸಲು ಬಿಜೆಪಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 19:11 IST
Last Updated 7 ಸೆಪ್ಟೆಂಬರ್ 2022, 19:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಗುರುವಾರ ನಡೆಸಲು ಉದ್ದೇಶಿಸಿದ್ದ ‘ಜನೋತ್ಸವ’ವನ್ನು ಮುಂದೂಡಿದೆ. ಈ ಮೂಲಕ ‘ಜನೋತ್ಸವ’ವನ್ನು ಮೂರನೇ ಬಾರಿಗೆ ಮುಂದೂಡಿದಂತಾಗಿದೆ. ಸೆ.10 ರಂದು ಜನೋತ್ಸವವನ್ನು ‘ಜನಸ್ಪಂದನ’ ಹೆಸರಿನಲ್ಲಿ ನಡೆಸಲು ಬಿಜೆಪಿ ತೀರ್ಮಾನಿಸಿದೆ.

ಗುರುವಾರ ನಡೆಯಬೇಕಿದ್ದ ಸಮಾವೇಶವನ್ನುಸಚಿವ ಉಮೇಶ ಕತ್ತಿ ಅವರ ನಿಧನದ ಕಾರಣ ಮುಂದೂಡಲಾಗಿದೆ.

ಮೊದಲ ಬಾರಿಗೆ ಜುಲೈ 28 ರಂದು ಜನೋತ್ಸವಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಸುಳ್ಯ ತಾಲ್ಲೂಕು ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಹತ್ಯೆ ನಡೆದಿದ್ದರಿಂದಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.